ರಷ್ಯಾ-ಯುಕ್ರೇನ್‌ ಯುದ್ಧ :ಯುಕ್ರೇನ್‌ ಮಕ್ಕಳ ರಷ್ಯಾದಲ್ಲಿ ಇಲಿಗಳ ಜೊತೆ ವಾಸ

masthmagaa.com:

ಇನ್ನೊಂದು ಕಡೆ ಯುದ್ಧಪೀಡಿತ ಯುಕ್ರೇನ್‌ನ ಖೇರ್ಸನ್ ಮತ್ತು ಖಾರ್ಕಿವ್‌ನಿಂದ ರಷ್ಯಾ ಸೇನೆ ಅಪಹರಿಸಿದ್ದ ಮಕ್ಕಳನ್ನ ಅವ್ರ ಕುಟುಂಬಕ್ಕೆ ಮರಳಿ ನೀಡಲಾಗಿದೆ. ಯುದ್ಧದ ಸಮಯದಲ್ಲಿ ಅಪಹರಿಸಲಾಗಿದ್ದ 31 ಮಕ್ಕಳನ್ನ ರಷ್ಯಾದಿಂದ ಮರಳಿ ಕರೆತರುವ ಸುದೀರ್ಘ ಕಾರ್ಯಾಚರಣೆ ನಂತರ ಮಕ್ಕಳು ತಮ್ಮ ಕುಟುಂಬಗಳೊಂದಿಗೆ ವಾಪಾಸ್‌ ಆಗಿದಾರೆ ಅಂತ ʻಸೇವ್ ಉಕ್ರೇನ್ʼ ಅನ್ನೋ ಮಾನವ ಹಕ್ಕುಗಳ ಸಂಘಟನೆ ಹೇಳಿದೆ. ಇದೇ ವೇಳೆ ಈ ಮಕ್ಕಳು ಇಲಿಗಳು ಹಾಗೂ ಜಿರಲೆಗಳ ಜೊತೆಯಲ್ಲಿ ವಾಸವಾಗಿದ್ರು ಅಂತ ಅರೋಪಿಸಲಾಗಿದೆ. ಇತ್ತ ರಷ್ಯಾದ ಪ್ರಧಾನ ಮಂತ್ರಿ ಮಿಖಾಯಿಲ್ ಮಿಶುಸ್ಟಿನ್ ಅವ್ರ ಒಪ್ಪಿಗೆ ಪಡೆದ ಮೇಲೆ ಮಾತ್ರವೇ ರಷ್ಯಾದ ಉನ್ನತ ಅಧಿಕಾರಿಗಳಿಗೆ ದೇಶ ಬಿಟ್ಟು ಹೊರಗೆ ಹೋಗಲು ಅನುಮತಿ ನೀಡಲಾಗುತ್ತೆ ಅಂತ ಅಮೆರಿಕ ಮೂಲದ ಥಿಂಕ್‌ ಟ್ಯಾಂಕ್‌ವೊಂದು ವರದಿ ಮಾಡಿದೆ.

-masthmagaa.com

Contact Us for Advertisement

Leave a Reply