ಸರೆಂಡರ್‌ ಸಾಧ್ಯವಿಲ್ಲ: ಪೋಪ್‌ ಹೇಳಿಕೆಗೆ ಯುಕ್ರೇನ್‌ ವಿರೋಧ!

masthmagaa.com:

ಯುಕ್ರೇನ್‌ ಕದನ ವಿರಾಮಕ್ಕೆ ಮುಂದಾಗ್ಬೇಕು. ರಷ್ಯಾ ಜೊತೆ ಯುದ್ಧ ಮಾಡೋದನ್ನ ನಿಲ್ಲಿಸ್ಬೇಕು ಅಂತ ಪೋಪ್‌ ಫ್ರಾನ್ಸಿಸ್‌ ನೀಡಿರೋ ಹೇಳಿಕೆಗೆ ಯುಕ್ರೇನ್‌ ಮತ್ತದರ ಮಿತ್ರ ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ರಷ್ಯಾ ಮುಂದೆ ಯುಕ್ರೇನ್‌ ಸರೆಂಡರ್‌ ಆಗೋಕೆ ಪೋಪ್‌ ಕರೆ ನೀಡ್ತಿದ್ದಾರೆ ಅಂತ ಟೀಕಿಸಲಾಗ್ತಿದೆ. ಪೋಪ್‌ ಫ್ರಾನ್ಸಿಸ್‌ ಅವ್ರ ಹೇಳಿಕೆಗೆ ರಿಯಾಕ್ಟ್‌ ಮಾಡಿರೋ ಯುಕ್ರೇನ್‌ ʻʻರಷ್ಯಾ ಮುಂದೆ ಸರೆಂಡರ್‌ ಆಗೋಕೆ ಸಾಧ್ಯಾನೇ ಇಲ್ಲ…ನಮ್ಮದು ಹಳದಿ ಮತ್ತು ನೀಲಿ ಬಣ್ಣದ ಬಾವುಟ. ನಾವು ಈ ಬಾವುಟಕ್ಕಾಗಿ ಬದುಕ್ತೀವಿ, ಸಾಯ್ತೀವಿ ಮತ್ತು ಮೇಲುಗೈ ಸಾಧಿಸ್ತೀವಿ. ಈ ಬಾವುಟ ಬಿಟ್ಟು ಬೇರೆ ಯಾವ್ದೇ ಬಾವುಟ ಹಾರಿಸಲ್ಲʼ ಅಂದಿದ್ದಾರೆ. ಜೊತೆಗೆ ʻನೀವು ಸತ್ಯದ ಪರ ನಿಲ್ಲಿʼ ಅಂತ ಪೋಪ್‌ ಫ್ರಾನ್ಸಿಸ್‌ಗೆ ಯುಕ್ರೇನ್‌ ಕರೆ ಕೊಟ್ಟಿದೆ. ಅಂದ್ಹಾಗೆ ಪೋಪ್‌ ಫ್ರಾನ್ಸಿಸ್‌ ಅವ್ರು ಇಂಟರ್‌ವ್ಯೂ ಒಂದ್ರಲ್ಲಿ ಇಂಡೈರೆಕ್ಟಾಗಿ ಯುಕ್ರೇನ್‌ ಕದನವಿರಾಮಕ್ಕೆ ಮುಂದಾಗ್ಬೇಕು ಅಂತ ಹೇಳಿದ್ರು. ʻಪರಿಸ್ಥಿಯನ್ನ ಅರ್ಥ ಮಾಡ್ಕೊಂಡು, ತಮ್ಮ ಜನರ ಬಗ್ಗೆನೂ ಯೋಚಿಸಿ ಬಿಳಿ ಬಾವುಟವನ್ನ ಹಾರಿಸೋ ಧೈರ್ಯ ಹೊಂದಿರೋರು…ಅದಕ್ಕಾಗಿ ಸಂಧಾನ ಮಾಡ್ಕೊಳ್ಳುವವ್ರನ್ನ ನಾನು ಬಹಳ ಶಕ್ತಿಶಾಲಿ ಅಂತ ಭಾವಿಸ್ತೀನಿʼ ಅಂತ ಹೇಳಿದ್ರು. ಆ ಮೂಲಕ ರಷ್ಯಾ ಜೊತೆಗೆ ಸಂಧಾನ ಮಾಡ್ಕೊಳ್ಳಿ ಅಂತ ಯುಕ್ರೇನ್‌ಗೆ ಪೋಪ್‌ ಹೇಳಿದ್ರು. ಪೋಪ್‌ ಅವ್ರ ಈ ಹೇಳಿಕೆಗೆ ಇದೀಗ ಯುಕ್ರೇನ್‌ ಕಡೆಯಿಂದಲೇ ಸಿಕ್ಕಾಪಟ್ಟೆ ಖಂಡನೆ ವ್ಯಕ್ತವಾಗಿದೆ.

-masthmagaa.com

Contact Us for Advertisement

Leave a Reply