ತನ್ನ ನಗರದ ಮೇಲೇ ದಾಳಿ ನಡೆಸಿದ ಯುಕ್ರೇನ್‌! 25 ಮಂದಿ ಸಾವು!

masthamagaa.com:

ಯುಕ್ರೇನ್‌ನ ಪೂರ್ವ ಭಾಗದಲ್ಲಿರೋ ರಷ್ಯಾ ಆಕ್ರಮಿತ ಡೊನೆಟ್ಸ್ಕ್‌ ನಗರದ ಮೇಲೆ ಯುಕ್ರೇನ್‌ ಡ್ರೋನ್‌ ದಾಳಿ ನಡೆಸಿದೆ. ತನ್ನ ನಾಗರಿಕರ ಮೇಲೆ ದಾಳಿ ನಡೆಸಿದೆ. ಘಟನಯಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಅಂತ ಡೊನೆಟ್ಸ್ಕ್‌ ಪ್ರದೇಶದಲದಲ್ಲಿರೊ ರಷ್ಯಾ ಅಧಿಕಾರಿ ಡೆನಿಸ್‌ ಪುಶಿಲಿನ್‌ ಹೇಳಿದ್ದಾರೆ. ಆದ್ರೆ ಯುಕ್ರೇನ್‌ ಮಾತ್ರ ಈ ದಾಳಿ ಬಗ್ಗೆ ಇದುವರೆಗೆ ಯಾವ್ದೇ ತರಹ ರಿಯಾಕ್ಟ್‌ ಮಾಡಿಲ್ಲ. ಡೊನೆಟ್ಸ್ಕ್‌ನ ಬ್ಯುಸಿ ಏರಿಯಾದಲ್ಲಿ ಅಂದ್ರೆ ಅಂಗಡಿಗಳು ಮತ್ತು ಮಾರ್ಕೆಟ್‌ಗಳಿರೊ, ಹೆಚ್ಚಿನ ಜನ ಓಡಾಟ ಇರುವಲ್ಲೇ ಈ ದಾಳಿ ನಡೆಸಲಾಗಿದೆ. ಅಂದ್ಹಾಗೆ ಕಳೆದ ಎರಡು ತಿಂಗಳಿಂದ ಇದೇ ರೀತಿ ಜನಸಂದಣಿಯಿರೋ ಜಾಗದಲ್ಲೇ ಎರಡು ದೇಶಗಳು ಹೆಚ್ಚು ದಾಳಿ ನಡೆಸ್ತಿವೆ. ಜೊತೆಗೆ ಈ ಬಗ್ಗೆ ಒಬ್ರಿಗೊಬ್ರು ಬೆರಳು ಮಾಡ್ತಿವೆ.

-masthmagaa.com

Contact Us for Advertisement

Leave a Reply