ನಮ್ಮ ಮಕ್ಕಳು ಯುಕ್ರೇನ್​ನಲ್ಲೇ ಬದುಕಬೇಕು! ಇವರ ಕಣ್ಣೀರ ಕಥೆ ನೋಡಿ..

masthmagaa.com:

ಯುಕ್ರೇನ್​ನ ಕುಟಂಬವೊಂದು ಮಾರಿಯೊಪೊಲ್‌ನಿಂದ ‘ಗ್ರೇಟ್‌ ಎಸ್ಕೇಪ್‌ʼ ಅನ್ನೋ ರೀತಿಯಲ್ಲಿ 125 ಕಿಲೋ ಮೀಟರ್​ ಕಾಲ್ನಡಿಗೆ ಮೂಲಕ ತಪ್ಪಿಸಿಕೊಂಡು ಬಂದಿದೆ. ಯುದ್ಧ ಪೆಟ್ಟಿಗೆ ಮಾರಿಯೊಪೊಲ್‌ ನಗರ ಈಗಾಗಲೇ ಧ್ವಂಸವಾಗಿದೆ. ಇಲ್ಲಿನ ನಿವಾಸಿಗಳಾದ ಯೆವ್ಗೆನ್‌ ಮತ್ತು ಟೆಟಿಯಾನಾ ದಂಪತಿ ತಮ್ಮ ನಾಲ್ಕು ಮಕ್ಕಳೊಂದಿಗೆ ಕಳೆದವಾರ ಮಾರಿಯೊಪೊಲ್​ ತೊರೆಯಲು ನಿರ್ಧರಿಸಿದ್ರು. ಆರಂಭದಲ್ಲಿ 6 ವರ್ಷದ ಪುಟ್ಟ ಮಗುವನ್ನ ಮೂರು ಚಕ್ರದ ಟ್ರಾಲಿಯಲ್ಲಿ ಕೂರಿಸಿ, ಅದನ್ನ ತಳ್ಕೊಂಡು ಉಳಿದವರು ನಡ್ಕೊಂಡು ಬಂದಿದ್ದಾರೆ. ಬಳಿಕ ಟ್ರಾಲಿಯನ್ನ ತಳ್ಳೋದಕ್ಕಿಂತ ನಡ್ಕೊಂಡು ಹೋಗೋದೇ ಬೆಸ್ಟ್ ಅಂದುಕೊಂಡಿದ್ದಾರೆ. ಹೀಗೆ ಐದು ದಿನ ನಡೆದಿದ್ದಾರೆ. ದಾರಿ ಮಧ್ಯ ಸಿಕ್ಕ ಮನೆಗಳಲ್ಲಿ ರಾತ್ರಿ ಮಲಗೋದು, ಊಟ ಮಾಡೋದು.. ಬೆಳಗ್ಗೆ ಎದ್ದು ಮತ್ತೆ ಪಾದಯಾತ್ರೆ ಶುರು ಮಾಡ್ತಿದ್ರು. ಹೀಗೆ ಬರುವಾಗ ಹಲವುಕಡೆ ರಷ್ಯಾ ಯೋಧರ ಚೆಕ್​ ಪಾಯಿಂಟ್​​ ಸಿಕ್ಕಿವೆ. ರಷ್ಯಾ ಯೋಧರಿಗೆ, ನಾವು ಸಂಬಂಧಿಕರ ಮನೆಗೆ ಹೋಗ್ತಿದ್ದೀವಿ ಅಂತೇಳಿ ಬಂದಿದ್ದಾರೆ. ರಷ್ಯಾ ಯೋಧರು ಕೂಡ ನೀವು ಎಲ್ಲಿಂದ ಬರ್ತಿದ್ದೀರಿ, ಎಲ್ಲಿಗೆ ಹೋಗ್ತಿದ್ದೀರಿ, ರಷ್ಯಾಗೆ ಯಾಕೆ ನೀವು ಹೋಗ್ಬಾರ್ದು ಅಂತ ಕೇಳ್ತಿದ್ರು. ಅವರು ನಮ್ಮನ್ನ ವೈರಿಗಳಂತೆ ನೋಡಿಲ್ಲ. ನಮ್ಗೆ ಸಹಾಯ ಮಾಡೋಕೆ ಪ್ರಯತ್ನಿಸಿದ್ರು ಅಂತ ಕುಟುಂಬದವರು ಹೇಳಿದ್ಧಾರೆ. ಸುಮಾರು 125 ಕಿಲೋ ಮೀಟರ್​ ನಡ್ಕೊಂಡು ಬಂದ ಈ ಕುಟುಂಬಕ್ಕೆ ತರಕಾರಿ ಮಾರುವವನೊಬ್ಬ ಝಪೋರಿಝಿಯಾ ನಗರದ ಬಳಿ ಡ್ರಾಪ್​ ಕೊಟ್ಟಿದ್ದಾನೆ. ಅಲ್ಲಿಂದ ಟ್ರೇನ್​ ಹತ್ತಿ ಯುಕ್ರೇನ್​ನ ಪಶ್ಚಿಮದಲ್ಲಿರೋ ಲೀವ್​​ ನಗರಕ್ಕೆ ಬಂದಿದ್ದಾರೆ. ಅಲ್ಲಿಂದ ಇವಾನೋ ಫ್ರಾನ್​ಕಿವ್​​ಸ್ಕ್​​ ನಗರಕ್ಕೆ ಬಂದು ನೆಲೆಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಟೆಟಿಯಾನಾ, ನಮ್ದು ಒಂದೇ ಗುರಿ.. ನಮ್ಮ ಮಕ್ಕಳು ಯುಕ್ರೇನ್​ನಲ್ಲೇ ಬದುಕಬೇಕು ಅಂತ. ಅವರು ಯುಕ್ರೇನಿಯನ್ನರು, ಅವರು ಬೇರೆ ದೇಶದಲ್ಲಿ ನೆಲೆಸೋದನ್ನ ನಾವು ಇಮ್ಯಾಜಿನ್​ ಕೂಡ ಮಾಡಕ್ಕಾಗಲ್ಲ ಎಂದಿದ್ಧಾರೆ. ಯೆವ್ಗೆನ್‌ ಮಾತನಾಡಿ, ನಾನು ಕೆಲಸ ಹುಡುಕಿಕೊಳ್ಳಬೇಕಿದೆ. ನಮ್ಮ ಮಕ್ಕಳನ್ನ ಶಾಲೆಗೆ ಸೇರಿಸಬೇಕಿದೆ. ನಾವು ಎಂಥಾ ಪರಿಸ್ಥಿತಿ ಎದುರಿಸಿ ಬಂದಿದ್ದೀವಿ ಅನ್ನೋದನ್ನ ಯಾವತ್ತೂ ಮರೆಯಲ್ಲ ಎಂದಿದ್ಧಾರೆ. ಮಗಳು ಮಾತನಾಡಿ, ನಾನು ಯುಕ್ರೇನ್​​ನಲ್ಲಿ ಬದುಕಬೇಕು. ಆದ್ರೆ ಮಾರಿಯೊಪೊಲ್​​ನಂಥ ನಗರದಲ್ಲಿ ಅಲ್ಲ ಎಂದಿದ್ಧಾರೆ.

-masthmagaa.com

Contact Us for Advertisement

Leave a Reply