ನ್ಯಾಟೋ ಸೇರಲು ಯುಕ್ರೇನ್‌ ಇನ್ನೂ ರೆಡಿಯಿಲ್ಲ: ಅಮೆರಿಕ

masthmagaa.com:

ಯುಕ್ರೇನ್‌ ನ್ಯಾಟೋ ಸೇರುವ ನಿರ್ಧಾರದಿಂದ ಸುಮಾರು 500 ದಿನಗಳಿಂದ ರಷ್ಯಾ ದಾಳಿಯನ್ನ ಫೇಸ್‌ ಮಾಡ್ತಿದೆ. ಆದ್ರೆ ಯುಕ್ರೇನ್‌ ಇನ್ನು ನ್ಯಾಟೋ ಸೇರೋಕೆ ರೆಡಿಯಿಲ್ಲ ಅಂತ ಅಮೆರಿಕ ಹೇಳಿದೆ. ನ್ಯಾಟೋ ಮೆಂಬರ್‌ಶಿಪ್‌ ಪಡೆಯೋಕೆ ಯುಕ್ರೇನ್‌ ತಯಾರಿದೆ ಅಂತ ನನಗೆ ಅನ್ನಿಸ್ತಾಯಿಲ್ಲ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ಹೇಳಿದ್ದಾರೆ. ರಷ್ಯಾ- ಯುಕ್ರೇನ್‌ ಯುದ್ಧಕ್ಕೆ ಪರೋಕ್ಷವಾಗಿ ಕಾರಣವಾಗಿರೋ ಅಮೆರಿಕ ಈಗ ತನ್ನ ಮಾತು ಬದಲಾಯಿಸುತ್ತಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಇತ್ತ ನ್ಯಾಟೋ ಸೇರೋಕೆ ಬೇಕಾದ ಎಲ್ಲಾ ಅರ್ಹತೆ ಯುಕ್ರೇನ್‌ಗೆ ಇದೆ ಅಂತ ಟರ್ಕಿ ಹೇಳಿದ್ದು, ಇದಕ್ಕೆ ಯುಕ್ರೇನ್‌ ಸಂತಸ ವ್ಯಕ್ತಪಡಿಸಿದೆ. ಇದೇ ವೇಳೆ ಯುದ್ಧ 500ನೇ ದಿನ ಪೂರೈಸಿರೋ ಹಿನ್ನಲೆಯಲ್ಲಿ ಟರ್ಕಿಯಲ್ಲಿ ಬಂಧಿಸಲಾಗಿದ್ದ 5 ಜನ ಕಮಾಂಡರ್‌ಗಳನ್ನ ಯುಕ್ರೇನ್‌ಗೆ ಹಸ್ತಾಂತರಿಸಲಾಗಿದೆ. ಇನ್ನೊಂದ್‌ ಕಡೆ ಕಮಾಂಡರ್‌ಗಳನ್ನ ರಿಲೀಸ್‌ ಮಾಡಿರೋ ಟರ್ಕಿಯ ನಿರ್ಧಾರವನ್ನ ರಷ್ಯಾ ಖಂಡಿಸಿದೆ. ಮತ್ತೊಂದ್‌ ಕಡೆ ಆಗಸ್ಟ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಟರ್ಕಿಗೆ ಭೇಟಿ ನೀಡುವ ಸಾಧ್ಯತೆಯಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply