ಯುಕ್ರೇನ್‌-ರಷ್ಯಾ ಸಂಘರ್ಷ ಕೊನೆಗೊಳಿಸಲು ದಕ್ಷಿಣ ಆಫ್ರಿಕ ನಾಯಕರ ಪ್ರಯತ್ನ ಸಫಲವಾಗುತ್ತಾ?

masthmagaa.com:

ಕಳೆದ 16 ತಿಂಗಳುನಿಂದ ನಿರಂತರವಾಗಿ ನಡಿತಾಯಿರೋ ಯುಕ್ರೇನ್‌ ಹಾಗೂ ರಷ್ಯಾ ಸಂಘರ್ಷದಿಂದ ಜಾಗತಿಕವಾಗಿ ಅನೇಕ ರಾಷ್ಟ್ರಗಳು ಹಲವಾರು ಸಮಸ್ಯೆಗಳನ್ನ ಎದುರಿಸ್ತಿವೆ. ಅದೇ ರೀತಿ ದಕ್ಷಿಣ ಆಫ್ರಿಕಾ ಕೂಡ ತಮ್ಮ ಖಂಡಕ್ಕೆ ಆಹಾರ ಹಾಗೂ ರಸಗೊಬ್ಬರ ಪೂರೈಕೆ ಸರಿಯಾಗಿ ಆಗದೇ ತೊಂದ್ರೆ ಅನುಭವಿಸ್ತಿದೆ. ಹೀಗಾಗಿ ಯುದ್ಧ ಕೊನೆಗಳಿಸೋ ನಿಟ್ಟಿನಲ್ಲಿ ಶಾಂತಿ ಮಾತುಕತೆಯ ಮಧ್ಯಸ್ಥಿಕೆ ವಹಿಸೋಕೆ ಆಫ್ರಿಕಾದ ನಾಯಕರು ಹಾಗೂ ಹಿರಿಯ ಅಧಿಕಾರಿಗಳ ನಿಯೋಗ ಯುಕ್ರೇನ್‌ಗೆ ಆಗಮಿಸಿದೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೋಸ್‌ ಜೊತೆ ಸೆನೆಗಲ್‌, ಜಾಂಬಿಯಾ, ಕಾಂಗೊ ಗಣರಾಜ್ಯದ ನಾಯಕರು ನಿನ್ನೆ ಯುಕ್ರೇನ್‌ ತಲುಪಿದ್ದಾರೆ. ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವ್ರನ್ನ ಭೇಟಿ ಮಾಡಿದ್ದಾರೆ. ಆದರೆ ಶಾಂತಿ ಮಾತುಕತೆಗೆ ಮನವೊಲಿಸಲು ಬಂದಿದ್ದ ನಾಯಕರಿಗೆ ಹಿನ್ನಡೆಯಾಗಿದೆ. ಯಾಕಂದ್ರೆ ಝೆಲೆನ್ಸ್ಕಿ ರಷ್ಯಾ ಜೊತೆ ಮಾತುಕತೆ ನಡೆಸೋದನ್ನ ಕಂಪ್ಲೀಟ್‌ ಆಗಿ ನಿರಾಕರಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ನಾಯಕರ ನಿಯೋಗ ಇಂದು ರಷ್ಯಾಗೆ ಭೇಡಿ ನೀಡಲಿದ್ದು, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರ ಜೊತೆ ಮಾತುಕತೆ ನಡೆಸಲಿದೆ.

-masthmagaa.com

Contact Us for Advertisement

Leave a Reply