ರಷ್ಯಾಗೆ ಬಗ್ಗದ ಬ್ರಿಟನ್‌! ಪುಟಿನ್‌ರ ರಷ್ಯಾ ವಿರುದ್ದ ರಿಷಿ ಸುನಾಕ್‌ ಯುಕೆ ಮಾಡೋಕೆ ಹೊರಟಿರೋದೇನು?

masthmagaa.com:

ಯುಕ್ರೇನ್‌ ಹಾಗೂ ರಷ್ಯಾ ನಡುವಿನ ಸಂಘರ್ಷ ಮತ್ತಷ್ಟು ತೀವ್ರವಾಗ್ತಿದೆ. ಈ ನಡುವೆ ರಷ್ಯಾ ವಿರುದ್ದ ಯುಕ್ರೇನ್‌ಗೆ ಫೈಟರ್‌ ಜೆಟ್‌ ಕೊಡೋದಕ್ಕೂ ಬ್ರಿಟನ್‌ ಮುಂದಾಗಿದೆ. ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಹಾಗೂ ನೆದರ್‌ಲ್ಯಾಂಡ್‌ ಪ್ರಧಾನಿ Mark Rutte ಅವರು ಇದಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಮಾತುಕತೆ ಮಾಡಿದಾರೆ. ಈ ವೇಳೆ ಯುಕ್ರೇನ್‌ಗೆ ಅಮೆರಿಕ ನಿರ್ಮಿತ ಎಫ್‌16 ಯುದ್ದ ವಿಮಾನವನ್ನ ಒದಗಿಸುವ ಕುರಿತು ಚರ್ಚೆ ನಡೆದಿದೆ ಅಂತ ರಿಷಿ ಸುನಾಕ್‌ ವಕ್ತಾರ ತಿಳಿಸಿದ್ದಾರೆ. ಈ ಮೂಲಕ ಯುಕ್ರೇನ್‌ – ರಷ್ಯಾ ಯುದ್ದ ಮತ್ತೊಂದು ಹಂತ ತಲುಪುವ ಸುಳಿವು ಸಿಕ್ತಾಯಿದೆ. ಯಾಕಂದ್ರೆ ಯುಕ್ರೇನ್‌ಗೆ ಯಾವುದೇ ಕಾರಣಕ್ಕೂ ಬಲಿಷ್ಠ ಅಸ್ತ್ರಗಳನ್ನ ಅಮೆರಿಕ ಮತ್ತು ಮಿತ್ರರು ಕೊಡಬಾರದು, ಕೊಟ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ರಷ್ಯಾ ಪಾಶ್ಚಿಮಾತ್ಯ ದೇಶಗಳಿಗೆ ವಾರ್ನ್‌ ಮಾಡ್ತಾ ಬರ್ತಾಯಿತ್ತು. ಅಲ್ದೇ ಬಲಿಷ್ಠ ಅಸ್ತ್ರಗಳನ್ನ ಕೊಟ್ರೆ ಈ ಯುದ್ದದಲ್ಲಿ ಪಾಶ್ಚಿಮಾತ್ಯರೂ ನೇರವಾಗಿ ಭಾಗವಹಿಸಿದಂತೆ ನಾವು ಭಾವಿಸ್ತೇವೆ, ಅಮೇಲೆ ಏನಾಗುತ್ತೋ ನಮಗೆ ಗೊತ್ತಿಲ್ಲ ಅಂತ ರಷ್ಯಾ ಧಮ್ಕಿ ಹಾಕಿತ್ತು. ಆದ್ರೆ ಈ ಎಚ್ಚರಿಕೆಗೆಲ್ಲಾ ಒಂದು ಪಕ್ಷ ಅಮೆರಿಕ ಬಗ್ಗಿದ್ರೂ, ಬ್ರಿಟನ್‌ ಮಾತ್ರ ಬಗ್ಗಿರೋ ರೀತಿ ಕಾಣಿಸ್ತಿಲ್ಲ. ಯಾಕಂದ್ರೆ ಯುಕ್ರೇನ್‌ಗೆ ಅಮೆರಿಕ ಒಂದಷ್ಟು ಹಣ, ಒಂದಷ್ಟು ಕಡಿಮೆ ತೀವ್ರತೆಯ ಆಯುಧಗಳನ್ನ ಕೊಟ್ಟಿದ್ದು ಬಿಟ್ರೆ ಯುದ್ದ ವಿಮಾನವನ್ನೆಲ್ಲಾ ಕೊಟ್ಟಿಲ್ಲ. ರಷ್ಯಾ ವಿರುದ್ದ ದಾಳಿ ಮಾಡುವ ಆಯುಧಗಳನ್ನ ಅಮೆರಿಕ ಕೊಟ್ಟಿಲ್ಲ. ರಷ್ಯಾ ದಾಳಿಯನ್ನ ಎದುರಿಸೋಕೆ ರಕ್ಷಣೆ ಮಾಡಿಕೊಳ್ಳೋಕೆ ಮಾತ್ರ ಅಮೆರಿಕ ಯುಕ್ರೇನ್‌ಗೆ ಆಯುಧ ಕೊಡ್ತಾ ಇದೆ. ಆದ್ರೆ ಬ್ರಿಟನ್‌ ಮಾತ್ರ ಈ ವಿಚಾರದಲ್ಲಿ ರಷ್ಯಾಗೆ ಹೆದರುತ್ತಿಲ್ಲ. ಅವರು ಯುಕ್ರೇನ್‌ಗೆ ಈಗಾಗಲೇ ಲಾಂಗ್‌ ರೇಂಜ್‌ ಮಿಸೈಲ್‌ ಕೊಡೋಕೂ ಒಪ್ಪಿದ್ದಾರೆ. ಈಗ ಯುದ್ದ ವಿಮಾನ ಕೊಡೋದಕ್ಕೂ ಮುಂದಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತೆ, ರಷ್ಯಾ ಬ್ರಿಟನ್‌ಗೆ ಯಾವ ಪ್ರತಿಕ್ರಿಯೆ ಕೊಡುತ್ತೆ ಕಾದು ನೋಡಬೇಕು. ಈ ಕಡೆ ರಷ್ಯಾ ಯುಕ್ರೇನ್‌ ಮೇಲೆ 6 ಹೈಪರ್‌ ಸಾನಿಕ್‌ ಮಿಸೈಲ್‌ಗಳನ್ನ ಬಳಸಿ ದಾಳಿ ಮಾಡಿದೆ. ನಾವು ಅದನ್ನ ಹೊಡೆದು ಹಾಕಿದ್ದೀವಿ ಅಂತ ಯುಕ್ರೇನ್‌ ಹೇಳಿದೆ. ರಷ್ಯಾ ಶಬ್ದಕ್ಕಿಂತ 10 ಪಟ್ಟು ವೇಗವಾಗಿ ಚಲಿಸುವ ಹೈಪರ್‌ ಸಾನಿಕ್‌ ಮಿಸೈಲ್‌ನ ನಮ್ಮ ಮೇಲೆ ಹಾರಿಸಿತ್ತು.ಆದ್ರೆ ಅಮೆರಿಕ ಕೊಟ್ಟಿರೋ US Patriot defence system ಬಳಸಿ ನಾವು ಅದನ್ನ ಹೊಡೆದು ಹಾಕಿದ್ದೀವಿ, ಕಾರ್ಯಾಚರಣೆ ಮಾಡುವ ವೇಳೆ ಏರ್‌ಡಿಫೆನ್ಸ್‌ ಸಿಸ್ಟಂಗೂ ಹಾನಿಯಾಗಿದೆ ಅಂತ ಯುಕ್ರೇನ್‌ ಮಾಹಿತಿ ಹಂಚಿಕೊಂಡಿದೆ.

-masthmagaa.com

Contact Us for Advertisement

Leave a Reply