ಯುಕ್ರೇನ್‌ ಬೆಂಬಲವಾಗಿ ನಿಂತ ಅಮೆರಿಕ, ಜರ್ಮನಿ ಹಾಗೂ ಇತರ G-7 ದೇಶಗಳು!

masthmagaa.com:

ರಷ್ಯಾದ ಬಿರುಸಿನ ದಾಳಿ ಬೆನ್ನಲ್ಲೇ, ಇತ್ತ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಇತರ ಜಿ7 ಒಕ್ಕೂಟದ ನಾಯಕರು ವರ್ಚುವಲ್‌ ಮೀಟಿಂಗ್‌ ಮಾಡೋಕೆ ಮುಂದಾಗಿದ್ದಾರೆ. ಯುಕ್ರೇನ್‌ಗೆ ಯಾವೆಲ್ಲಾ ರೀತಿಯಲ್ಲಿ ಹೆಲ್ಪ್‌ ಮಾಡಬಹುದು ಅನ್ನೊದನ್ನ ಚರ್ಚೆ ಮಾಡೋದು. ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನ ಸಂಘರ್ಷದ ಹೊಣೆಗಾರರನ್ನಾಗಿ ಮಾಡೋದು ಈ ಸಭೆಯ ಉದ್ದೇಶವಾಗಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಕೂಡ ಭಾಗವಹಿಸಿಲಿದ್ದಾರೆ ಅಂತ ವೈಟ್‌ ಹೌಸ್‌ ಹೇಳಿದೆ. ಇದರ ಮಧ್ಯೆಯೇ ರಷ್ಯಾ ದಾಳಿಯನ್ನ ಖಂಡಿಸಿ ಮಾತನಾಡಿದ ಬೈಡೆನ್‌, ಪುಟಿನ್‌ ಮತ್ತೆ ತಮ್ಮ ಕ್ರೂರ ನಡೆಯನ್ನ ಅನುಸರಿಸಿದ್ದಾರೆ. ಯುಕ್ರೇನ್‌ ಜನರ ಮೇಲೆ ಅಕ್ರಮ ಯುದ್ದವನ್ನ ಮಾಡಿದ್ದಾರೆ ಅಂತ ಬೈಡೆನ್‌ ಆರೋಪಿಸಿದ್ದಾರೆ. ಜೊತೆಗೆ ರಷ್ಯಾ ದಾಳಿಯನ್ನ ಎದುರಿಸೋಕೆ ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳನ್ನ ಕೊಡೊದಾಗಿ ಝೆಲೆನ್ಸ್ಕಿ ಅವ್ರಿಗೆ ಮಾತು ಕೊಟ್ಟಿದ್ದಾರೆ. ಇದೇ ವೇಳೆ ಜರ್ಮನಿ ಕೂಡ ಯುಕ್ರೇನ್‌ ನೆರವಿಗೆ ದಾಪುಗಾಲು ಹಾಕಿದೆ. ಯುಕ್ರೇನ್‌ನ್ನ ರಷ್ಯಾ ವಿರುದ್ದ ಬಲಪಡಿಸೋಕೆ ಏನೆಲ್ಲಾ ಸಹಾಯ ಬೇಕೋ ಎಲ್ಲವನ್ನ ನಾವು ಮಾಡಲಿದ್ದೇವೆ ಅಂತ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್‌ (Annalena Baerbock) ಟ್ವೀಟ್‌ ಮಾಡಿ ಹೇಳಿದ್ದಾರೆ. ಹಾಗೂ ನಮ್ಮ ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳು ಯುಕ್ರೇನ್‌ಗೆ ಕೆಲ ದಿನಗಳಲ್ಲಿ ರೀಚ್‌ ಆಗುತ್ವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply