ನಮ್ಮ ಜಾಗಕ್ಕಾಗಿ ಕೊನೇವರೆಗೂ ಹೋರಾಡ್ತೀವಿ ; ಯುಕ್ರೇನ್‌ ಪ್ರಧಾನಿ

masthmagaa.com:

ಯುಕ್ರೇನ್‌ – ರಷ್ಯಾ ನಡುವಿನ ರಕ್ತಸಿಕ್ತ ಸಮರ ಎರಡನೇ ತಿಂಗಳನ್ನ ಸಮೀಪಿಸ್ತಾ ಇದ್ದಂತೆ ದಾಳಿಯ ತೀವ್ರತೆ ಕೂಡ ಜಾಸ್ತಿಯಾಗ್ತಾಯಿದೆ. ನಾಮಕಾವಸ್ಥೆಯ ಮಾತುಕತೆಗಳು, ಅಂತರಾಷ್ಟ್ರೀಯ ಒತ್ತಡಗಳಿಗೆ ಕಿಮ್ಮತ್ತೇ ಕೊಡದ ರಷ್ಯಾ, ದಾಳಿಯನ್ನ ಮುಂದುವರೆಸ್ತಾನೇ ಇದೆ. ಇತ್ತ ತನ್ನ ನೆಲದಲ್ಲಿ ಇಷ್ಟೆಲ್ಲಾ ನಷ್ಟವಾದ್ರೂ ಯುಕ್ರೇನ್‌ ಕೂಡ ಬಂದೂಕನ್ನ ನಾನು ಮಾತ್ರ ಮೊದಲು ಕೆಳಗಿಡೋ ಮಾತೇ ಇಲ್ಲ ಅಂತ ಹೇಳ್ತಾಯಿದೆ.ಒಟ್ಟಿನಲ್ಲಿ ಯಾರೋಬ್ಬರೂ ಕೂಡ ಸದ್ಯಕ್ಕೆ ಯುದ್ದ ನಿಲ್ಲಿಸೋ ಮಾತಾಡ್ತಿಲ್ಲ..ಯುಕ್ರೇನ್‌ ಸೈನಿಕರು ಬಂದೂಕು ಬಿಟ್ಟು ಶರಣಾಗಿ ಇಲ್ಲ ಭಯಾನಕ ಪರಿಣಾಮಕ್ಕೆ ತುತ್ತಾಗಿ ಅಂತ ರಷ್ಯಾದ ರಕ್ಷಣಾ ಕಛೇರಿ ಕೊನೇ ಎಚ್ಚರಿಕೆ ಕೊಟ್ಟಿದೆ. ಇದಕ್ಕೆ ಈಗ ಯುಕ್ರೆನ್‌ ಕೂಡ ಪ್ರತಿಕ್ರಿಯಿಸಿದ್ದು ಕೊನೆವರೆಗೂ ಹೋರಾಡುತ್ತೇವೆ ಅಂತ ಹೇಳಿದೆ. ಸಂದರ್ಶನವೊಂದರಲ್ಲಿ ಮಾತನಾಡಿರೋ ಯುಕ್ರೇನ್‌ ಪ್ರಧಾನಿ ಡೆನಿಶ್‌ ಸಿಮಿಹಾಲ್‌ ಮಾರಿಯೋಪೋಲ್‌ ಸಂಪೂರ್ಣವಾಗಿ ರಷ್ಯಾ ಕಂಟ್ರೋಲ್‌ನಲ್ಲಿ ಇಲ್ಲ. ನಮ್ಮ ಸೈನಿಕರು ಕೂಡ ಅಲ್ಲಿ ದೊಡ್ಡ ಮಟ್ಟದಲ್ಲಿ ಇದ್ದಾರೆ. ಅದೂ ಸೇರಿದಂತೆ ನಾವು ನಮ್ಮ ಜಾಗಕ್ಕಾಗಿ ಕೊನೇವರೆಗೂ ಹೋರಾಡಲಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply