ಯುಕ್ರೇನ್‌ ಅಧ್ಯಕ್ಷ ಸ್ಥಾನದಿಂದ ಝೆಲನ್ಸ್ಕಿಯನ್ನ ಕಿತ್ತೊಗೆಯೋದೆ ನಮ್ಮ ಗುರಿ: ರಷ್ಯಾ

masthmagaa.com:

ಯುಕ್ರೇನ್‌ ರಷ್ಯಾ ಸಂಘರ್ಷ ಮುಂದುವರೆದಿದೆ. ಇದರ ನಡುವೆಯೇ ಯುಕ್ರೇನ್‌ ಪ್ರೆಸಿಡೆಂಟ್ ಝೆಲೆನ್ಸ್ಕಿ ವಿರುದ್ದ ರಷ್ಯಾ ಆಡಳಿತ ಮತ್ತೊಮ್ಮೆ ಬೆಂಕಿಯುಗುಳಿದೆ. ಈ ಬಗ್ಗೆ ಮಾತನಾಡಿರೋ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌, ʻಯುಕ್ರೇನ್‌ ಅಧ್ಯಕ್ಷ ಸ್ಥಾನದಿಂದ ವೊಲೊಡಿಮಿರ್‌ ಝೆಲನ್ಸ್ಕಿಅನ್ನ ಕಿತ್ತೊಗೆಯೋದೇ ನಮ್ಮ ಪ್ರಮುಖ ಗುರಿʼ ಅಂತ ಹೇಳಿದ್ದಾರೆ. ಇತ್ತ ಯುಕ್ರೇನ್‌ನ ಬೆಂಬಲಿಸಿದ ಯುರೋಪ್‌ ರಾಷ್ಟ್ರಗಳಿಗೆ ಬುದ್ದಿ ಕಲಿಸೋಕೆ ನಾಳೆಯಿಂದ ಯುರೋಪ್‌ಗೆ ಪೂರೈಸುತ್ತಿದ್ದ ಗ್ಯಾಸ್‌ನ್ನ ನಿಲ್ಲಿಸಲಾಗುತ್ತೆ ಅಂತ ರಷ್ಯಾ ದೊಡ್ಡ ಅನೌನ್ಸ್‌ ಮಾಡಿದೆ. ಮತ್ತೊಂದ್‌ ಕಡೆ ಇತ್ತೀಚಿಗಷ್ಟೇ ರಷ್ಯಾ ತನ್ನ ಅನಿಲ ಪೂರೈಕೆಯನ್ನ ಆರಂಭಿಸಿತ್ತು. ಈಗ ಮತ್ತೆ ಟರ್ಬೈನ್‌ ಸರಿಯಿಲ್ಲ ಅನ್ನೊ ಕಾರಣ ನೀಡಿ, ನಾರ್ಡ್‌ ಸ್ಟ್ರೀಮ್‌ ಮೂಲಕ ಜರ್ಮನಿಗೆ ಪುರೈಸುತ್ತಿದ್ದ ಅನಿಲವನ್ನ ಕಡಿಮೆ ಮಾಡಲಾಗುತ್ತೆ ಅಂತ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ, ʻಇದು ಯುರೋಪ್‌ ವಿರುದ್ದ ಕೇವಲ ಗ್ಯಾಸ್‌ ಬ್ಲ್ಯಾಕ್‌ಮೇಲ್‌ ಹೊರತು ಮತ್ತೇನಲ್ಲʼ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply