ಯುಕ್ರೇನ್‌ ನಲ್ಲಿ ರಾಸಾಯನಿಕ ಅಸ್ತ್ರ ಬಳಸಿದ್ಯಾ ರಷ್ಯಾ ? ಯುಕ್ರೇನ್‌ ಹೇಳಿದ್ದೇನು.

masthmagaa.com:

ಯುಕ್ರೇನ್‌ – ರಷ್ಯಾ ರಣಕಾಳಗ ಭೀಕರ ಸ್ವರೂಪಕ್ಕೆ ತಿರುಗ್ತಾನೇ ಇದೆ. ಈ ನಡುವೆಯೇ
ಯುಕ್ರೇನ್‌ ಯುದ್ದದಲ್ಲಿ ರಷ್ಯಾದ ಕೆಮಿಕಲ್‌ ವೆಪನ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಯುಕ್ರೇನ್‌ ಮೇಲೆ ರಷ್ಯಾ ರಸಾಯನಿಕ ಅಸ್ತ್ರಗಳ ಬಳಕೆಗೆ ಮುಂದಾಗಬಹುದು ಅಂತ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ಇದು ತುಂಬಾ ಗಂಭೀರವಾದ ವಿಚಾರ. ನಾನು ಯೂರೋಪ್‌ ನಾಯಕರಿಗೆ ಮತ್ತೊಮ್ಮೆ ಹೇಳ್ತಾಯಿದ್ದೀನಿ, ರಷ್ಯಾ ನಮ್ಮ ಮೇಲೆ ಕೆಮಿಕಲ್‌ ವೆಪನ್‌ ಗಳನ್ನ ಬಳಸುವ ಸಾದ್ಯತೆ ಹೆಚ್ಚಾಗಿದೆ. ರಷ್ಯಾ ಮೇಲೆ ನೀವು ಮತ್ತಷ್ಟು ನಿರ್ಬಂಧ ಹೇರ್ಬೇಕು ಅಂತ ಮನವಿ ಮಾಡಿದ್ದಾರೆ. ಇತ್ತ ಅಮೆರಿಕಾ ಕೂಡ ಕೆಮಿಕಲ್‌ ಅಸ್ತ್ರದ ಬಗ್ಗೆ ಗಂಭೀರ ಆರೋಪ ಮಾಡಿದ್ದು ಯುಕ್ರೇನ್‌ನ ಮಾರಿಯೋಪೋಲ್ ನಗರದ ಮೇಲೆ ರಷ್ಯಾ ರಾಸಾಯನಿಕ ಅಸ್ತ್ರಗಳನ್ನ ಬಳಸಿರಬಹುದು, ಅದರಲ್ಲೂ ಟಿಯರ್‌ ಗ್ಯಾಸ್‌ ಮಿಕ್ಸಡ್‌ ಕೆಮಿಕಲ್‌ ಅಸ್ತ್ರಗಳನ್ನ ರಷ್ಯಾ ಬಳಕೆ ಮಾಡಿರೋ ಸಾಧ್ಯತೆ ಹೆಚ್ಚಿದೆ ಅಂತ ಅಮೆರಿಕಾ ಹೇಳಿದೆ. ಆದ್ರೆ ಇದು ಇನ್ನೂ ಕನ್ಪಮ್‌ ಆಗಿಲ್ಲ, ನಾವು ಅದನ್ನ ಹತ್ತಿರದಿಂದ ಮಾನಿಟರ್‌ ಮಾಡ್ತಾಯಿದ್ದೀವಿ ಅಂತ ಪೆಂಟಗಾನ್‌ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಮಾರಿಯೋಪೋಲ್‌ನಲ್ಲಿ ರಷ್ಯಾ ಕೆಮಿಕಲ್‌ ಅಸ್ತ್ರ ಬಳಸಿರೋ ಕುರಿತು ನಾವು ತನಿಖೆ ಮಾಡ್ತೀವಿ ಅಂತ ಯುಕ್ರೇನ್‌ ಹೇಳಿದೆ. ಯುಕ್ರೇನ್‌ ಸಂಸದೆ ಇವಾನ್‌ ಕಿಂಪುಚ್‌ ಮಾರಿಯೋಪೋಲ್‌ ನಲ್ಲಿ ರಷ್ಯಾ ಕಂಡುಹಿಡಿಯೋಕೆ ಸಾದ್ಯವಾಗದ ದ್ರವರೂಪದ ವಸ್ತುಗಳನ್ನ ಬಳಕೆ ಮಾಡಿದೆ ಅಂತ ವರದಿಯಾಗ್ತಿದೆ, ನಾವು ಅದನ್ನತನಿಖೆ ಮಾಡ್ತೀವಿ ಅಂತ ಹೇಳಿದ್ದಾರೆ.ಇನ್ನು ಇಂಗ್ಲೆಂಡ್‌ ಕೂಡ ನಾವು ಈ ಬಗ್ಗೆ ನಮ್ಮ ಸ್ನೇಹಿತರ ಜೊತೆ ಕೆಲ್ಸ ಮಾಡೋಕೆ ಶುರುಮಾಡಿದ್ದೀವಿ. ಮಾರಿಯೋಪೋಲ್‌ ಬಗ್ಗೆ ಗಮನಕೊಟ್ಟಿದ್ದೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply