ರಷ್ಯಾದಲ್ಲಿ ಯುದ್ಧ ಕೈದಿಗಳಿಗೆ ಚಿತ್ರಹಿಂಸೆ!

masthmagaa.com:

ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ರಷ್ಯಾ- ಯುಕ್ರೇನ್‌ ಯುದ್ಧದಲ್ಲಿ ಯುದ್ಧ ಅಪರಾಧಗಳು ಹೆಚ್ಚಾಗುತ್ತಿವೆ ಅಂತ ವರದಿಯೊಂದ್ರಿಂದ ತಿಳಿದು ಬಂದಿದೆ. ರಷ್ಯಾ ಆಕ್ರಮಿತ ದಕ್ಷಿಣ ಯುಕ್ರೇನ್‌ನಲ್ಲಿ ತಾತ್ಕಾಲಿಕ ಬಂಧನ ಕೇಂದ್ರಗಳಲ್ಲಿ ಇರಸಲಾಗಿರೋ ಹೆಚ್ಚಿನ ಯುದ್ಧ ಕೈದಿಗಳಿಗೆ ಚಿತ್ರ ಹಿಂಸೆ ನೀಡಲಾಗ್ತಿದೆ ಅಂತ ಮೊಬೈಲ್‌ ಜಸ್ಟೀಸ್‌ ಟೀಮ್‌ ತನ್ನ ವರದಿಯಲ್ಲಿ ಹೇಳಿದೆ. ಜೊತೆಗೆ ರಷ್ಯಾ ಸೈನಿಕರು ಸಾಮಾನ್ಯವಾಗಿ ಲೈಂಗಿಕ ದೌರ್ಜನ್ಯವನ್ನ ಅಸ್ತ್ರವಾಗಿ ಬಳಸುತ್ತಿದ್ದಾರೆ ಅಂತ ಆರೋಪಿಸಲಾಗಿದೆ. ಅಂದ್ಹಾಗೆ ಇತ್ತೀಚೆಗೆ ಯುಕ್ರೇನ್‌ನ ಮಕ್ಕಳನ್ನ ಬಲವಂತವಾಗಿ ಎಳದುಕೊಂಡು ಹೋಗಿ ಬಂಧಿಸಲಾಗಿದೆ ಅಂತ ಆರೋಪಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ICC ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಆದ್ರೆ ರಷ್ಯಾ ಮಾತ್ರ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದು, ತಾನು ಯಾವುದೇ ವಾರ್‌ ಕ್ರೈಮ್‌ ಮಾಡಿಲ್ಲ ಅಂತ ಹೇಳಿಕೊ‍ಳ್ಳುತ್ತಿದೆ.

-masthmagaa.com

Contact Us for Advertisement

Leave a Reply