‌ಹೊಸ ಅಧಿಕಾರದೊಂದಿಗೆ 74ನೇ ಬರ್ತಡೇ ಆಚರಿಸಿಕೊಂಡ ಬ್ರಿಟನ್‌ ಕಿಂಗ್!

masthmagaa.com:

ನಿನ್ನೆ ಅಂದ್ರೆ ನವಂಬರ್‌ 14ರಂದು ಬ್ರಿಟನ್‌ನ ರಾಜ 3ನೇ ಚಾರ್ಲ್ಸ್‌ ತಮ್ಮ 74ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಆಚರಣೆಯನ್ನ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಲ್ಲದೇ ಕುಟುಂಬದ ಜೊತೆ ತುಂಬಾ ಪ್ರೈವೇಟ್‌ ಆಗಿ ಸೆಲೆಬ್ರೇಟ್‌ ಮಾಡಿಕೊಂಡಿದ್ದಾರೆ. ಇದೇ ವೇಳೆ 400 ವರ್ಷ ಇತಿಹಾಸ ಹೊಂದಿರೊ ರೇಂಜರ್‌ ಹುದ್ದೆಯನ್ನ ಅಲಂಕರಿಸಿದ್ದಾರೆ. 1952ರಿಂದ ಚಾರ್ಲ್ಸ್‌ ಅವರ ತಂದೆ ಪ್ರಿನ್ಸ್‌ ಫಿಲಿಪ್‌ ಅವ್ರು ಈ ಅಧಿಕಾರದಲ್ಲಿದ್ರು. ಇದೀಗ ಅವರ ತಂದೆಯನ್ನ ಚಾರ್ಲ್ಸ್‌ ರಿಪ್ಲೇಸ್‌ ಮಾಡಿ ಗ್ರೇಟ್‌ ವಿಂಡ್ಸರ್‌ ಪಾರ್ಕ್‌ನ ರೇಂಜರ್‌ ಆಗಿದ್ದಾರೆ. ರೇಂಜರ್‌ ಕೆಲಸ ದೇಶದ ಹಳೆಯ ಎಸ್ಟೇಟ್‌ಗಳ ದಿನನಿತ್ಯದ ಕಾರ್ಯಗಳ ಬಗ್ಗೆ ಡೆಪ್ಯುಟಿ ರೇಂಜರ್‌ ಗೈಡ್‌ ಮಾಡೋದು.

-masthmagaa.com

Contact Us for Advertisement

Leave a Reply