ಸೆಪ್ಟೆಂಬರ್‌ 5 ರಂದು ಬ್ರಿಟನ್‌ಗೆ ನೂತನ ಪ್ರಧಾನಿ ನೇಮಕ!

masthmagaa.com:

ಬೋರಿಸ್‌ ಜಾನ್ಸನ್‌ ರಿಂದ ತೆರವಾಗಿರೋ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಹೊಸಬರನ್ನ ಸೆಪ್ಟಂಬರ್‌ 5 ರಂದು ನೇಮಿಸಲಾಗುತ್ತೆ ಅಂತ ಕನ್ಸರ್ವೇಟಿವ್‌ ಪಕ್ಷದ ಮುಖ್ಯಸ್ಥ ಗ್ರಾಹಂ ಬ್ರಾಡಿ ಸೋಮವಾರ ಅನೌನ್ಸ್‌ ಮಾಡಿದ್ದಾರೆ. ಪಕ್ಷದ ನಾಯಕತ್ವದಿಂದ ಪ್ರಧಾನಿಯನ್ನ ಫೈನಲ್‌ ಮಾಡ್ತೀವಿ. ನಾಮ ನಿರ್ದೇಶನ ಮಾಡೋ ಅಭ್ಯರ್ಥಿಗಳು ಕಡ್ಡಾಯವಾಗಿ 20 ಸದಸ್ಯರ ಬೆಂಬಲ ಹೊಂದಿರಬೇಕು. ಪಕ್ಷದ ಮೊದಲ ಸುತ್ತಿನ ಮತದಾನ ಬುಧವಾರ ನಡೆಯಲಿದೆ. ಗುರುವಾರ ನಡೆಯೋ ಎರಡನೇ ಸುತ್ತಿನ ಮತದಾನಕ್ಕೆ 30 ಮತಗಳು ಅವಶ್ಯಕ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಪ್ರಧಾನಿ ರೇಸ್‌ನಲ್ಲಿ ಇದುವರೆಗೂ 11 ಜನರು ತಮ್ಮ ಹೆಸರು ಘೋಷಣೆ ಮಾಡಿದ್ದು ಭಾರತ ಮೂಲದ ರಿಷಿ ಸುನಾಕ್‌ ಮುಂಚೂಣಿಯಲ್ಲಿದ್ದಾರೆ.

-masthmagaa.com

Contact Us for Advertisement

Leave a Reply