ವಿಶ್ವಸಂಸ್ಥೆ ಮುಖ್ಯಸ್ಥರಿಂದ ರಷ್ಯಾ-ಯುಕ್ರೇನ್​ ಪ್ರವಾಸ! ಸುಮ್ಮನಾಗ್ತಾರಾ ಪುಟಿನ್​?

masthmagaa.com:

ಜಾಗತಿಕವಾಗಿ ಸಾಕಷ್ಟು ತಲ್ಲಣಕ್ಕೆ ಕಾರಣವಾಗಿರೋ ರಷ್ಯಾ-ಯುಕ್ರೇನ್‌ ಸಂಘರ್ಷ ನಿರಂತರ ಮುಂದುವರೆದಿದೆ. ಉಭಯ ದೇಶಗಳ ಶಾಂತಿ ಮಾತುಕತೆ ಪ್ರಯತ್ನಗಳು ವಿಫಲವಾಗುತ್ತಲೇ ಇವೆ. ಈ ಬೆನ್ನಲ್ಲೇ ಯುದ್ದ ತಡೆಯುವ ನಿಟ್ಟಿನಲ್ಲಿ ಮಹತ್ತರ ಬೆಳವಣಿಗೆಯಾಗುತ್ತಿದ್ದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟನಿಯೋ ಗುಟ್ರೆಸ್‌ ಎರಡೂ ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಮುಖ್ಯಸ್ಥರನ್ನ ಭೇಟಿಯಾಗಲಿದ್ದಾರೆ. ಈ ಬಗ್ಗೆಅವರ ವಕ್ತಾರ ಎರಿ ಕನೆಕೊ ಮಾಹಿತಿ ಕೊಟ್ಟಿದ್ದು, ಯುಕ್ರೇನ್‌ನಲ್ಲಿ ಸದ್ಯ ಶಾಂತಿ ಸ್ಥಾಪನೆಯಾಗೋದು ತುಂಬಾ ಅಗತ್ಯವಿದೆ. ಹಾಗಾಗಿ ಸೋಮವಾರ ಆಂಟನಿಯೋ ಗುಟ್ರೆಸ್‌ ರಷ್ಯಾಗೆ ತೆರಳಲಿದ್ದು ಪುಟಿನ್‌ ಹಾಗೂ ವಿದೇಶಾಂಗ ಸಚಿವ ಸರ್ಜೆ ಲಾವ್ರೋವ್‌ ಜೊತೆ ಮಾತುಕತೆ ನಡೆಸಲಿದ್ದಾರೆ ಅಂತ ಹೇಳಿದ್ದಾರೆ. ಬಳಿಕ ಪಕ್ಕದ ಯುಕ್ರೇನ್​ಗೆ ಹಾರಲಿರುವ ಗುಟ್ರೆಸ್‌ ಝೆಲೆನ್ಸ್ಕಿ ಹಾಗೂ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಜೊತೆ ಮಾತುಕತೆ ನಡೆಸಲಿದ್ದಾರೆ. ಅಂದ್ಹಾಗೆ ಸಂಘರ್ಷ ಶುರುವಾದಾಗಿನಿಂದ ಇಲ್ಲೀತನಕ ಯುದ್ಧ ನಿಲ್ಲಿಸಬೇಕು ಅಂತ ಉಭಯ ದೇಶಗಳಿಗೆ ಗುಟ್ರೆಸ್‌ ಮನವಿ ಮಾಡ್ತಾನೇ ಬಂದಿದ್ರು. ಈ ಬಗ್ಗೆ ಚರ್ಚೆ ಮಾಡೋಕೆ ಪುಟಿನ್‌ಗೆ ಫೋನ್​ ಮಾಡಿದ್ರೆ ಪುಟಿನ್ ಪೋನ್‌ ಕೂಡ ರಿಸೀವ್‌ ಮಾಡ್ತಾ ಇರ್ಲಿಲ್ಲ. ಅದಕ್ಕೆ ಈಗ ಅಲ್ಲಿಗೇ ಹೋಗಿ ಮಾತಾಡ್ಸಣ ಅಂತ ಹೊರಟಿದ್ದಾರೆ. ಇದಕ್ಕೆ ಪುಟಿನ್ ಏನ್ ಹೇಳ್ತಾರೆ, ಯಾವ ರೀತಿ ರಿಯಾಕ್ಟ್ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು.

-masthmagaa.com

 

Contact Us for Advertisement

Leave a Reply