ಇಸ್ರೇಲ್‌ಗೆ ಜರ್ಮನಿ ನೆರವು ನೀಡೊದನ್ನ ಮುಂದುವರೆಸಬಹುದು: UN ಕೋರ್ಟ!

masthmagaa.com:

ಇಸ್ರೇಲ್‌ಗೆ ಮಿಲಟರಿ ನೆರವು ನೀಡೊದನ್ನ ಜರ್ಮನಿ ಕಂಟಿನ್ಯೂ ಮಾಡ್ಬಹುದು ಅಂತ ಅಂತರಾಷ್ಟ್ರೀಯ ನ್ಯಾಯಾಲಯ ತಾತ್ಕಲಿಕ ತೀರ್ಪು ನೀಡಿದೆ. ಗಾಜಾದಲ್ಲಿ ಪ್ರಬಲ ದಾಳಿ ನಡೆಸ್ತಿರೊ ಇಸ್ರೇಲ್‌ಗೆ ಜರ್ಮನ್‌ ಮಿಲಟರಿ ನೆರವು ನೀಡೊದನ್ನ ನಿಲ್ಲಿಸಲು ತುರ್ತು ಕ್ರಮಗಳನ್ನ ಜಾರಿಗೊಳಿಸೋಕಾಗಲ್ಲ ಅಂತ UN ಕೋರ್ಟ್‌ ಹೇಳಿದೆ. ಅಂದ್ಹಾಗೆ ಇಸ್ರೇಲ್‌ಗೆ ಆಯುಧ ಕೊಟ್ಟು ಜರ್ಮನಿ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನ ಉಲ್ಲಂಘನೆ ಮಾಡ್ತಿದೆ ಅಂತೇಳಿ ನಕಾರಗುವಾ ದೇಶ ದೂರು ನೀಡಿತ್ತು. ಈ ಬಗ್ಗೆ ವಿಚಾರಣೆ ನಡೆದು ಕೋರ್ಟ್‌ ಈ ರೀತಿ ಹೇಳಿದೆ. ಇನ್ನು ಕೋರ್ಟ್‌ ನಿರ್ಧಾರವನ್ನ ಸ್ವಾಗತಿಸಿರೊ ಜರ್ಮನ್‌ ವಿದೇಶಾಂಗ ಸಚಿವಾಲಯ, ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಅಂತೇಳಿದೆ. ಇನ್ನು ಈ ಪ್ರಕರಣವನ್ನ ಸಂಪೂರ್ಣವಾಗಿ ಇತ್ಯರ್ಥಗೊಳಿಸಿ ಅಂತ ಕೋರ್ಟ್‌ಗೆ ಜರ್ಮನಿ ಮನವಿ ಮಾಡಿತ್ತು. ಆದ್ರೆ ಈ ಮನವಿಯನ್ನ ತಿರಸ್ಕರಿಸಿರೊ ಕೋರ್ಟ್‌, ಈ ಕೇಸ್‌ ಇನ್ನು ಕಂಟಿನ್ಯೂ ಆಗಲಿದೆ ಅಂತೇಳಿದೆ.

-masthmagaa.com

Contact Us for Advertisement

Leave a Reply