ಪಾಕ್‌ ಅಲ್ಪಸಂಖ್ಯಾತರ ಮೇಲಾಗ್ತಿರೋ ದೌರ್ಜನ್ಯ ಖಂಡಿಸಿದ ವಿಶ್ವಸಂಸ್ಥೆ!

masthmagaa.com:

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಆಗ್ತಿರೋ ದೌರ್ಜನ್ಯವನ್ನ ವಿಶ್ವಸಂಸ್ಥೆ ಖಂಡಿಸಿದೆ. ಬಲವಂತವಾಗಿ ಮತಾಂತರ ಮಾಡೋದನ್ನ ಇಲ್ಲಿಗೆ ನಿಲ್ಲಿಸಿ ಅಂತೇಳಿದೆ. ಜೊತೆಗೆ ಹಿಂದೂ ಮತ್ತು ಕ್ರಿಶ್ಚಿಯನ್‌ ಮತಕ್ಕೆ ಸೇರಿರೋ ಎಲ್ಲಾ ಮಹಿಳೆಯರನ್ನ ಕೂಡ ಯಾವ್ದೇ ತಾರತಮ್ಯ ಮಾಡದೇ ಸಮಾನವಾಗಿ ನೋಡಿ ಅಂತ ಕರೆ ಕೊಟ್ಟಿದೆ. ಪಾಕ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೀತಿರೋ ಶೋಷಣೆ ಖಂಡಿಸಿ ವಿಶ್ವಸಂಸ್ಥೆಯ ಕೆಲ ತಜ್ಞರು ಈ ರೀತಿ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ʻಎಲ್ಲಾ ಸಮುದಾಯದ ಮಹಿಳೆಯರನ್ನ ಸಮಾನವಾಗಿ ನೋಡ್ಬೇಕು. ಪ್ರಮುಖವಾಗಿ ಕ್ರಿಶ್ಚಿಯನ್‌ ಮತ್ತು ಹಿಂದೂ ಹೆಣ್ಮಕ್ಕಳನ್ನ ಮತಾಂತರಕ್ಕೆ ಫೋರ್ಸ್‌ ಮಾಡಲಾಗ್ತಿದೆ. ಅವ್ರನ್ನ ಅಪಹರಣ ಮಾಡಿ ಕಳ್ಳಸಾಗಾಟ ನಡೆಸಲಾಗ್ತಿದೆ. ಬಲವಂತವಾಗಿ ಬೇಗ ಮದುವೆ ಮಾಡಿಸಿ…ಅವ್ರ ಮೇಲೆ ಗುಲಾಮಗಿರಿ ಚಲಾಯಿಸಲಾಗ್ತಿದೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಲಾಗ್ತಿದೆ. ಇಂತಹ ಕೃತ್ಯಗಳನ್ನ ಎಳ್ಳಷ್ಟು ಸಹಿಸಲಾಗೋದಿಲ್ಲ ಅಥ್ವಾ ಸಮರ್ಥಿಸಲಾಗೋದಿಲ್ಲʼ ಅಂತ ತಜ್ಷರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply