ವರ್ಲ್ಡ್‌ ಫೂಡ್‌ ಪ್ರೊಗ್ರಾಮ್‌ಗೆ ಹಣಕಾಸು ತೊಂದರೆ: ಪ್ಯಾಲೇಸ್ತೈನ್‌ಗಳಿಗೆ ಸ್ಟಾಪ್‌ ಆದ ನೆರವು

masthmagaa.com:

ಹಣದ ಕೊರೆತೆಯಿಂದ ಪ್ಯಾಲೇಸ್ತೈನ್‌ಗೆ ಪೂರೈಸುತ್ತಾ ಬಂದಿದ್ದ ಆಹಾರದ ನೆರವನ್ನ ಸ್ಥಗಿತಗೊಳಿಸೋದಾಗಿ ವರ್ಲ್ಡ್‌ ಫೂಡ್‌ ಪ್ರೊಗ್ರಾಮ್‌ (WEP) ಹೇಳಿದೆ. ಫಂಡ್‌ನ ತೀವ್ರ ಕೊರತೆ ಉಂಟಾಗಿದ್ದು, 2 ಲಕ್ಷಕ್ಕೂ ಅಧಿಕ ಪ್ಯಾಲೆಸ್ಥಯನ್‌ಗೆ ಒದಗಿಸುತ್ತಿದ್ದ ನೆರವನ್ನ ಮುಂದಿನ ತಿಂಗಳಿಂದ ಸ್ಟಾಪ್‌ ಮಾಡಲಾಗುತ್ತೆ ಪ್ಯಾಲೆಸ್ಥಯನಲ್ಲಿರೊ WEP ಅಧಿಕಾರಿ ಹೇಳಿದ್ದಾರೆ. ಇದೇ ವೇಳೆ ಗಾಜಾ ಪಟ್ಟಿ ಹಾಗೂ ವೆಸ್ಟ್‌ಬ್ಯಾಂಕ್‌ನಲ್ಲಿ ಅತಿಹೆಚ್ಚು ಬಡತನ ಹಾಗೂ ಆಹಾರದ ಅಭದ್ರತೆಯಿದೆ. ಹೀಗಾಗಿ ಅಲ್ಲಿನ 1.4 ಲಕ್ಷ ಜನರಿಗೆ ನೆರವನ್ನ ನೀಡಲಾಗುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಗಾಜಾ ಪಟ್ಟಿಯಲ್ಲಿ 23 ಲಕ್ಷ ಜನರಲ್ಲಿ 45% ಜನ ನಿರುದ್ಯೋಗಿಗಳಾಗಿದ್ದು, 80% ಜನ ಅಂತಾರಾಷ್ಟ್ರೀಯ ನೆರವಿನ ಮೇಲೆ ಡಿಪೆಂಡ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply