ಯುಕ್ರೇನ್‌ 1.2 ಲಕ್ಷ ಮಕ್ಕಳನ್ನ ಹೊತ್ತೊಯ್ತಾ ರಷ್ಯಾ?

masthmagaa.com:

ರಷ್ಯಾ ಯುಕ್ರೇನಿಂದ 1.2 ಲಕ್ಷ ಮಕ್ಕಳನ್ನ ತಗೊಂಡು ಹೋಗಿದೆ ಅಂತ ಯುಕ್ರೇನ್‌ನ ವಿಶ್ವಸಂಸ್ಥೆ ರಾಯಭಾರಿ ಸೆರ್ಗಿ ಕಿಸ್ಲಿಟ್ಯಾ ಗಂಭೀರ ಆರೋಪ ಮಾಡಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತಾಡಿರೋ ಅವ್ರು, ಈ ರೀತಿ ಆರೋಪ ಮಾಡಿದ್ದು, ಜೊತೆಗೆ ಈ ಮಕ್ಕಳನ್ನ ದತ್ತು ನೀಡೋಕೆ ಸರಳ ಆಗ್ಲಿ ಅಂತ ಒಂದು ಮಸೂದೆ ಕೂಡ ಜಾರಿ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇದ್ರಲ್ಲಿ ಬಹುತೇಕ ಮಕ್ಕಳು ಮರಿಯೊಪೋಲ್‌ನಿಂದ ಹೊರಹೋಗಿದ್ದು ಅವ್ರನ್ನ ಮೊದಲು ಡೊನೆಟ್ಸ್ಕಗೆ ಕರೆದೊಯ್ದು ನಂತ್ರ ರಷ್ಯಾದ ಟಾಗನ್ರೋಗ್‌ಗೆ ಕರೆದೊಯ್ಯಲಾಗಿದೆ ಅಂತ ಸೆರ್ಗಿ ಹೇಳಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರೋ ವಿಶ್ವಸಂಸ್ಥೆಯ ಮಕ್ಕಳ ಆಯೋಗ( UNICEF)ನ ಮ್ಯಾನ್ಯುವೆಲ್‌ ಫಾಂಟೈನ್‌, ಯುಕ್ರೇನ್‌ನ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ ಆದ್ರೂ ಕೂಡ ನಾವು ಈ ಬಗ್ಗೆ ತನಿಖೆ ಮಾಡ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ಇದುವರೆಗು ಯುಕ್ರೇನ್‌ನ ಮೂರನೇ ಎರಡರಷ್ಟು ಮಕ್ಕಳು ಮನೆಯನ್ನ ತೊರೆದಿದ್ದಾರೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply