ದೆಹಲಿಯ 3 ಪಾಲಿಕೆ ವಿಲೀನ: ಇನ್ಮೇಲೆ ‘ಮುನ್ಸಿಪಾಲ್‌ ಕಾರ್ಪರೇಶನ್‌ ಆಫ್‌ ಡೆಲ್ಲಿ’!

masthmagaa.com:

ಪೂರ್ವ ದೆಹಲಿ, ದಕ್ಷಿಣ ಮತ್ತು ಉತ್ತರ ದೆಹಲಿಯನ್ನ ಒಟ್ಟಾಗಿ ಮುನ್ಸಿಪಾಲ್‌ ಕಾರ್ಪರೇಶನ್‌ ಆಫ್‌ ಡೆಲ್ಲಿ ಅಂತ ಕರೆಯಲಾಗುತ್ತೆ ಅಂತ ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಹೇಳಿದ್ದಾರೆ. ಇವರು ಇವತ್ತು ಈ ಬಿಲ್‌ ಅನ್ನ ರಾಜ್ಯ ಸಭೆಯಲ್ಲಿ ಪರಿಚಯಿಸಿದ್ದಾರೆ. ಕೇಂದ್ರ ಸರಕಾರ ಈ ಮುನ್ಸಿಪಾಲ್‌ ಕಾರ್ಪರೇಶನ್‌ ಆಫ್‌ ಡೆಲ್ಲಿಯ ಕೆಲಸಗಳನ್ನ ನೋಡೊಕೊಳ್ಳಲು ಅಧಿಕಾರಿಗಳನ್ನ ನೇಮಿಸುತ್ತೆ ಅಂತಲೂ ಹೇಳಿದ್ದಾರೆ. ಈ ಹಿಂದೆ ಏಪ್ರಿಲ್‌ 5ರಂದು ರಾಜ್ಯಸಭೆಯಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಮಸೂದೆ 2022 ಅನ್ನ ಅಂಗೀಕರಿಸಿತ್ತು. ಇದು ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನು ಒಟ್ಟುಗೂಡಿಸುವ ಉದ್ದೇಶವನ್ನ ಹೊಂದಿತ್ತು. 1911ರ ಡೆಲ್ಲಿ ಮುನ್ಸಿಪಾಲ್‌ ಕಾರ್ಪರೇಶನ್‌ ಆಕ್ಟ್‌ ಪ್ರಕಾರ ದೆಹಲಿಯಲ್ಲಿ ಮೂರು ಮುನ್ಸಿಪಾಲ್‌ ಕಾರ್ಪೊರೇಶನ್‌ಗಳಿದ್ದವು.

-masthmagaa.com

Contact Us for Advertisement

Leave a Reply