ಗುಂಡು ಹಾರಿಸಿದ ಪಾಕ್‌! ಭಾರತದಿಂದ ತಕ್ಕ ತಿರುಗೇಟು!

masthmagaa.com:

ಇನ್ನು ಆ ಕಡೆ ಮಿಡಲ್‌ ಈಸ್ಟ್‌ ಹೊತ್ತಿ ಉರಿಯುತ್ತಿದ್ರೆ ಈ ಕಡೆ ಪಾಪಿ ಪಾಕ್‌ ಹಿಮಾಲಯ ಕಣಿವೆಯನ್ನ ಉದ್ವಿಗ್ನಗೊಳಿಸಿದೆ. ಜಮ್ಮು- ಕಾಶ್ಮೀರ ಗಡಿಯಲ್ಲಿ ಪಾಕ್‌ನ ಪುಂಡರ ಸೇನೆ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ. ಪಾಕ್‌ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಯೋಧರು ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದಾರೆ ಅಂತ BSF ಹೇಳಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅರ್ನಿಯಾ ಪ್ರದೇಶದಲ್ಲಿನ BSF ಪೋಸ್ಟ್‌ಗಳ ಮೇಲೆ ಪಾಕ್‌ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ಪ್ರಾರಂಭಿಸಿದ್ರು. ಇದಕ್ಕೆ ಭಾರತೀಯ ಪಡೆಗಳಿಂದಲೂ ತಕ್ಕ ಪ್ರತಿಕ್ರಿಯೆ ಕೊಡಲಾಗಿದೆ ಅಂತ BSF ​ತಿಳಿಸಿದೆ. ಅಂದ್ಹಾಗೆ ಅಕ್ಟೋಬರ್‌ 17ರಂದೂ ಇದೇ ರೀತಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಈ ಬಗ್ಗೆ ರಾಜತಾಂತ್ರಿಕವಾಗಿ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಿದ್ರೂ ಮತ್ತೆ ಗಡಿಯಲ್ಲಿ ಪಾಕ್‌ ಪುಂಡಾಟ ಮೆರೆದಿದೆ. ಇನ್ನು 2021ರಲ್ಲಿ ಎರಡೂ ಸೇನೆಗಳ ನಡುವೆ ಕದನ ವಿರಾಮ ಒಪ್ಪಂದ ಆಗಿತ್ತು. ಆದ್ರೆ ಪಾಕ್‌ ಈ ಬಾರಿ ಅದನ್ನ ಸೀರಿಯಸ್ಸಾಗಿ ಉಲ್ಲಂಘನೆ ಮಾಡ್ತಾ ಇದೆ. ಕಳೆದ 10 ದಿನಗಳಲ್ಲಿ ಎರಡನೇ ಬಾರಿಗೆ ಕದನ ವಿರಾಮ ಉಲ್ಲಂಘಿಸಿದೆ.

-masthmagaa.com

Contact Us for Advertisement

Leave a Reply