ಪುಟಿನ್‌ರ ಯುದ್ದ ಯಂತ್ರದ ಹೃದಯ ಭಾಗಕ್ಕೆ ಏಟು ಕೊಡ್ತೀವಿ: ಬ್ರಿಟನ್‌

masthmagaa.com:

G-7 ಗುಂಪಿನ 4 ಶಕ್ತಿಯುತ ರಾಷ್ಟ್ರಗಳು ರಷ್ಯಾದ ಚಿನ್ನ ಆಮದಿನ ಮೇಲೆ ನಿಷೇಧ ಹೇರೋಕೆ ನಿರ್ಧರಿಸಿವೆ ಅಂತ ವರದಿಯಾಗಿದೆ. ರಷ್ಯಾ ವಿರುದ್ದ ಹೇರಿರೋ ನಿರ್ಬಂಧಗಳ ಪ್ರಭಾವವನ್ನ ಅವಾಯಿಡ್‌ ಮಾಡೋಕೆ ಹಾಗೂ ಆಲಿಗಾರ್ಕ್‌ಗಳು ಈ ಅಮೂಲ್ಯ ಲೋಹವನ್ನ ಖರೀದಿ ಮಾಡೋದನ್ನ ತಡೆಯೋಕೆ ಈ ರೀತಿ ಮಾಡಲಾಗ್ತಿದೆ ಅಂತ ಬ್ರಿಟನ್‌ ಹೇಳಿದೆ. ಬ್ರಿಟನ್‌, ಕೆನಡ, ಜಪಾನ್‌ ಮತ್ತು ಅಮೆರಿಕ ದೇಶಗಳು ಈ ಕ್ರಮ ತೆಗೆದುಕೊಳ್ಳೋಕೆ ಮುಂದಾಗಿವೆ. ಈ ಬಗ್ಗೆ ಮಾತನಾಡಿರೋ ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ ರಷ್ಯಾದ ಆಲಿಗಾರ್ಕ್‌ಗಳನ್ನ ನೇರವಾಗಿ ಹೊಡೆದು ಪುಟಿನ್‌ರ ಯುದ್ದ ಯಂತ್ರದ ಹೃದಯಭಾಗಕ್ಕೆ ಏಟು ಕೊಡ್ತೀವಿ ಅಂತ ಅಬ್ಬರಿಸಿದ್ದಾರೆ.

-masthmagaa.com

Contact Us for Advertisement

Leave a Reply