ಇಸ್ರೇಲ್‌ ರಾಯಭಾರಿ ಕಚೇರಿ ಮುಂದೆ ಬೆಂಕಿ ಹಚ್ಕೊಂಡ ಯೋಧ!

masthmagaa.com:

ಗಾಜಾ ಯುದ್ದದ ವಿಚಾರವಾಗಿ ಅಮೆರಿಕದಲ್ಲಿ ಪ್ರತಿಭಟನೆಗಳು ನಡಿತಾನೆ ಇವೆ. ಇದೀಗ ಅಮೆರಿಕದ ಏರ್‌ಪೋರ್ಸ್‌ನ ಸೈನಿಕರೊಬ್ರು ಅಲ್ಲಿನ ಇಸ್ರೇಲ್‌ ರಾಯಭಾರಿ ಕಚೇರಿ ಎದುರೇ ತಮಗೆ ತಾವು ಬೆಂಕಿ ಹಚ್ಚಿಕೊಂಡಿರೋ ಘಟನೆ ನಡೆದಿದೆ. ಕರ್ತವ್ಯದಲ್ಲಿದ್ದ ವೇಳೆ ಆ ಸೈನಿಕ ಈ ರೀತಿ ಬೆಂಕಿ ಹಚ್ಕೊಂಡಿದ್ದು, ಬೆಂಕಿ ನಂದಿಸಿದ ಸೇನಾ ಸಿಬ್ಬಂದಿ ಆ ಸೈನಿಕನನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿರೊ ಆ ಸೈನಿಕನ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ. ಅಲ್ಲದೆ ಘಟನೆ ಬಗ್ಗೆ ಕಾರಣ ತಿಳಿಯೋಕೆ ಅಮೆರಿಕದ ಗುಪ್ತಚರ ದಳ ಹಾಗೂ ಪೋಲಿಸರು ತನಿಖೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply