ಲೆಗ್ರಂಜಿಯನ್‌ ಪಾಯಿಂಟ್‌ಗಳಿಗಾಗಿ ಸ್ಪೇಸ್‌ ರೇಸ್!‌ ಚೀನಾಗೆ ತಲೆಬಿಸಿ!

masthmagaa.com:

ಭೂಮಿ ಮೇಲೆ ಮುಗೀತು ಈಗ ಸ್ಪೇಸ್‌ ಹಾಗೂ ಚಂದ್ರನ ಮೇಲೆ ಜಾಗಗಳನ್ನ ಅಕ್ವೈರ್‌ ಮಾಡ್ಕೊಳ್ಳೋಕೆ ಕಾಂಪಿಟೇಷನ್‌ ಸ್ಟಾರ್ಟ್‌ ಆಗಿದೆ. ಇತ್ತೀಚೆಗೆ ಇಸ್ರೋದ ಆದಿತ್ಯ L1 ನೌಕೆ ಭೂಮಿ ಹಾಗೂ ಸೂರ್ಯನ ಮಧ್ಯೆ ಇರೋ L1 ಲೆಗ್ರಂಜಿಯನ್‌ ಪಾಯಿಂಟ್‌ಗೆ ತಲುಪ್ತು. ಅದೇ ತರ ಇದರ ವಿರುದ್ಧ ದಿಕ್ಕಿನಲ್ಲಿ, ಸೂರ್ಯ ಹಾಗೂ ಭೂಮಿಯ ದೂರಕ್ಕಿರೋ L2 ಲೆಗ್ರಂಜಿಯನ್‌ ಪಾಂಯಿಂಟ್‌ನಲ್ಲಿ ನಾಸಾದ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಇದೆ. ಇದೇ ತರ ಒಟ್ಟು ಐದು ಲೆಗ್ರಂಜಿಯನ್‌ ಪಾಯಿಂಟ್‌ಗಳಿವೆ. ನಾಸಾ ಇವುಗಳನ್ನ ಸ್ಪೇಸ್‌ನಲ್ಲಿರೋ ಪಾರ್ಕಿಂಗ್‌ ಸ್ಪಾಟ್‌ಗಳು ಅಂತಾನೆ ಕರೆಯುತ್ತೆ. L2ನಲ್ಲಿ ಚೀನಾದ Queqiao relay satellite ಕೂಡ ಇದೆ. ಈಗ ಇದೇ ಚೀನಾ, ನನ್ನ ಆಸ್ಟ್ರೋಪಾಲಿಟಿಕಲ್‌ ಪ್ಲಾನ್‌ಗಳಿಗೆ ಅಮೆರಿಕ ಕೌಂಟರ್‌ ಕೊಡೋಕೆ ಟ್ರೈ ಮಾಡ್ತಿದೆ. ಲೆಗ್ರಂಜಿಯನ್‌ ಪಾಯಿಂಟ್‌ಗಳಲ್ಲಿ ಪರ್ಮನೆಂಟ್‌ ಸ್ಟೇಶನ್‌ಗಳನ್ನ ನಿರ್ಮಿಸೋಕೆ ಅಲ್ಲಿನ ಸರ್ಕಾರ ಫಂಡಿಂಗ್‌ ಮಾಡ್ತಿದೆ ಅಂತ ಆರೋಪಿಸಿದೆ.

-masthmaga.com

Contact Us for Advertisement

Leave a Reply