ಚೀನಾಗೆ ಕೌಂಟರ್‌ ಕೊಡೋಕೆ ಕೈಜೋಡಿಸಿದ ಭಾರತ-ಅಮೆರಿಕ, ಏನೀ ಸ್ಟ್ರಾಟಜಿ?

masthmagaa.com:

ಭಾರತ-ಅಮೆರಿಕಗಳು ಒಟ್ಟಾಗಿ ಚೀನಾಗೆ ಟಕ್ಕರ್‌ ಕೊಡೊ ಮಿಲಿಟರಿ ಡೀಲ್‌ ಒಂದಕ್ಕೆ ಕೈ ಹಾಕಿವೆ. ನಿನ್ನೆ 2+2 ಮೀಟಿಂಗ್‌ಗಾಗಿ ಭಾರತಕ್ಕೆ ಬಂದಿದ್ದ US ಡಿಫೆನ್ಸ್‌ ಸೆಕ್ರೆಟರಿ ಲಾಯ್ಡ್‌ ಆಸ್ಟಿನ್‌ ಹೀಗೊಂದು ಆಫರ್‌ ನೀಡಿದ್ದಾರೆ. Stryker ಎಂಬ ಸೈನಿಕರನ್ನ ಹೊತ್ತೊಯ್ಯಬಲ್ಲ, ಬಹುಪಯೋಗಿ, ಶಸ್ತ್ರಸಜ್ಜಿತ ವಾಹನಗಳನ್ನ ಒಟ್ಟಿಗೆ ತಯಾರಿಸೊ ಪ್ಲಾನ್‌ ಮುಂದಿಟ್ಟಿದ್ದಾರೆ. ಕೆನಡಾ ಮೂಲದ ಜೆನರಲ್‌ ಡೈನಮಿಕ್ಸ್ ಲ್ಯಾಂಡ್‌ ಸಿಸ್ಟಮ್ಸ್‌ ಕಂಪನಿಯ ಈ ವಾಹನವನ್ನ ಅಮೆರಿಕ ಈಗಾಗ್ಲೆ ಬಹಳಷ್ಟು ಸಂಖ್ಯೆಯಲ್ಲಿ ತನ್ನ ಸೇನೆಯಲ್ಲಿ ನಿಯೋಜಿಸಿದೆ. ರಷ್ಯಾ ವಿರುದ್ಧದ ಕಾರ್ಯಾಚರಣೆಗೆ ಯುಕ್ರೇನ್‌ಗೆ ಬೈಡೆನ್‌ ಹಲವು ಸ್ಟ್ರೈಕರ್‌ಗಳನ್ನ ಕಳಿಸಿದ್ದಾರೆ. ಭಾರತ ಸಾವಿರಾರು ಸ್ರ್ಟೈಕರ್‌ಗಳನ್ನ ತಯಾರಿಸಿ, ಅವುಗಳಿಗೆ ಆ್ಯಂಟಿ ಟ್ಯಾಂಕ್‌ ಮಿಸೈಲ್‌ ಸಿಸ್ಟಮ್‌, ಯುದ್ಧಭೂಮಿಯ ಸರ್ವೇಲೆನ್ಸ್‌ ಹಾಗೂ ಕಮ್ಯಾಂಡ್‌ ವಾಹನಗಳ ರೂಪದಲ್ಲಿ ಇವುಗಳನ್ನ ಮಾಡಿಫೈ ಮಾಡಿ ಬಳಸಲು ಪ್ಲಾನ್‌ ಮಾಡಿದೆ. ದಾರಿಯಿಲ್ಲದ ಕಷ್ಟದ ಟೆರೈನ್‌ಗಳಲ್ಲಿ ಸಾಗಬಲ್ಲ ಈ ಎಂಟು ಚಕ್ರದ ವಾಹನಗಳು ಚೀನಾ ಗಡಿಯಲ್ಲಿನ ಕಾರ್ಯಾಚರಣೆಗಳಿಗೆ ಹೆಲ್ಪ್‌ ಆಗಲಿದೆ ಎನ್ನಲಾಗ್ತಿದೆ. ಚೀನಾ ಗಡಿಯಲ್ಲಿ ಆಗಾಗ ಉದ್ವಿಗ್ನತೆಯ ಸಂದರ್ಭಗಳು ಬರೋದ್ರಿಂದ ಈ ಸ್ಟ್ರಾಟಜಿ ಭಾರತಕ್ಕೆ ಮೇಲುಗೈ ಕೊಡಲಿದೆ. ಒಟ್ನಲ್ಲಿ ಭಾರತ ಅಮೆರಿಕ ತಮ್ಮ ರಕ್ಷಣಾ ಸಹಕಾರವನ್ನ ಬೂಸ್ಟ್‌ ಮಾಡಿ, ತಮ್ಮ ಬಳಿ ಇರೋ ಉಪಕರಣಗಳನ್ನ ಡೈವರ್ಸಿಫೈ ಮಾಡಿ, ಇಂಡೋ-ಪೆಸಿಫಿಕ್‌ನಲ್ಲಿ ಚೀನಾ ಪ್ರಾಬಲ್ಯಕ್ಕೆ ಅಡ್ಡಗಾಲಾಕೋಕೆ ರೆಡಿ ಆಗಿವೆ.

-masthmagaa.com

Contact Us for Advertisement

Leave a Reply