ಅಮೆರಿಕದಿಂದ ಯುಕ್ರೇನ್‌ಗೆ ಮತ್ತೆ ಮಿಲಿಟರಿ ಸಹಾಯ! ಈ ಬಾರಿ ಹರಿದ ಹಣವೆಷ್ಟು ಗೊತ್ತಾ?

masthmagaa.com:

ಯುಕ್ರೇನ್‌ ಯುದ್ದದ ಮಧ್ಯೆದಲ್ಲಿಯೇ ಪುಟಿನ್‌ ಘೋಷಿಸಿದ್ದ ಸೇನಾ ಸಜ್ಜುಗೊಳಿಸುವಿಕೆಗೆ ಅಭೂತಪೂರ್ವ ಬೆಂಬಲ ಸಿಕ್ತಾಯಿದೆ ಅಂತ ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ. ಪುಟಿನ್‌ ಆದೇಶ ಮಾಡಿದ್ದ ಎರಡೇ ವಾರದಲ್ಲಿ ಸುಮಾರು 2 ಲಕ್ಷ ಮಂದಿ ಯುವಕರು ರಷ್ಯಾ ಸೇನೆಗೆ ಸೇರ್ಪಡೆಯಾಗಿದ್ದಾರೆ ಅಂತ ಮಾಹಿತಿ ಪ್ರಕಟಿಸಿದೆ.
ಇತ್ತ ಯುಕ್ರೇನ್‌ಗೆ ಅಮೆರಿಕ ಹಾಗೂ ಅದರ ಮಿತ್ರ ದೇಶಗಳ ನೆರವಿನ ಹರಿವು ಕಂಟಿನ್ಯೂ ಆಗಿದೆ. ಅದರಲ್ಲೂ ಅಮೆರಿಕ ಅಂತೂ ರಷ್ಯಾ ಮೇಲೆ ಬಡಿದಾಡಿ ಅಂತ ಯುಕ್ರೇನ್‌ಗೆ ಬಿಲಿಯನ್‌ ಗಟ್ಟಲೆ ಹಣದ ಹೊಳೆಯನ್ನೇ ಹರಿಸ್ತಿದೆ. ಇದೀಗ ಹೊಸದಾಗಿ 625 ಮಿಲಿಯನ್‌ ಡಾಲರ್‌ ನೆರವು ನೀಡೋದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಜೋ ಬೈಡನ್‌ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಜೊತೆಗೆ ಫೋನ್‌ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯುಕ್ರೇನ್‌ಗೆ ಹೊಸದಾಗಿ 625 ಮಿಲಿಯನ್‌ ಡಾಲರ್‌ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 5,125 ಕೋಟಿ ರೂಪಾಯಿ ಹಣ ಕೊಡ್ತೀವಿ. ಅದನ್ನ ಸೇನೆಗೆ ಬಳಸಿಕೊಳ್ಳಿ. ಅದರ ಜೊತೆಗೆ High Mobility Artillery Rocket System (HIMARS) ಅನ್ನ ಕೂಡ ಕೊಡ್ತೀವಿ ಅದನ್ನೂ ತಗೊಳ್ಳಿ ಅಂತ ಘೋಷಣೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply