ಯುಕ್ರೇನ್‌ಗೆ F-16 ನೀಡೋಕೆ ಡೆನ್ಮಾರ್ಕ್‌ ಹಾಗೂ ನೆದರ್‌ಲೆಂಡ್ಸ್‌ಗೆ ಅಮೆರಿಕದಿಂದ ಗ್ರೀನ್‌ ಸಿಗ್ನಲ್!

masthmagaa.com:

ರಷ್ಯಾ ವಿರುದ್ಧ ತನ್ನ ದೇಶವನ್ನ ಉಳಿಸಿಕೊಳ್ಳಲು ಹೋರಾಡ್ತಿರೋ ಯುಕ್ರೇನ್‌ಗೆ F-16 ಫೈಟರ್‌ ಜೆಟ್‌ಗಳನ್ನ ನೀಡಲು ಡೆನ್ಮಾರ್ಕ್‌ ಹಾಗೂ ನೆದರ್‌ಲೆಂಡ್ಸ್‌ಗೆ ಅಮೆರಿಕ ಗ್ರೀನ್‌ ಸಿಗ್ನಲ್‌ ನೀಡಿದೆ. ಯಾವಾಗ ಯುಕ್ರೇನ್‌ ಪೈಲೆಟ್‌ಗಳು ಸಂಪೂರ್ಣವಾಗಿ ಜೆಟ್‌ಗಳನ್ನ ಆಪರೇಟ್‌ ಮಾಡೋಕೆ ಸಮರ್ಥರಾಗ್ತಾರೊ ಆಗ F-16 ಜೆಟ್‌ ನೀಡಿ ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಹೇಳಿದೆ. ಅಂದ್ಹಾಗೆ ಈಗಾಗಲೇ ಉಭಯ ದೇಶಗಳು ಯುಕ್ರೇನ್‌ ಪೈಲೆಟ್‌ಗಳಿಗೆ F-16 ಜೆಟ್‌ಗಳನ್ನ ಆಪರೇಟ್‌ ಮಾಡಲು ತರಬೇತಿ ನೀಡೋಕೆ ರೆಡಿಯಾಗಿವೆ. ಈ ತಿಂಗಳಿಂದ ಟ್ರೈನಿಂಗ್‌ ಸ್ಟಾರ್ಟ್‌ ಆಗಲಿದೆ. ಹಾಗೂ 2024ರ ಆರಂಭದ ವೇಳೆಗೆ ಪೈಲೆಟ್‌ಗಳು ರೆಡಿಯಾಗ್ತಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply