ರಷ್ಯಾದ ಯುದ್ಧ ವಿಮಾನಗಳನ್ನ ಖರೀದಿ ಮಾಡಿದ ಅಮೆರಿಕ!

masthmagaa.com:

ಹಾವು ಮುಂಗುಸಿ ಬೇಕಾದ್ರೆ ಒಂದು ಪಕ್ಷ ಒಟ್ಟಿಗೆ ಕೂತು ಕಷ್ಟ ಸುಖ ಮಾತಾಡ್ಬಹುದು. ಆದ್ರೆ ರಷ್ಯಾ-ಅಮೆರಿಕ ಮಾತ್ರ ಒಂದಾಗಲ್ಲ ಅನ್ನೋದು ಜಗತ್ತಿಗೆ ಗೊತ್ತಿರೋ ವಿಚಾರ. ಈ ನಡುವೆ ಆಶ್ಚರ್ಯ ಅನ್ನೋ ರೀತಿಯಲ್ಲೀಗ ಅಮೆರಿಕ ರಷ್ಯಾದ ಯುದ್ಧ ವಿಮಾನಗಳನ್ನ ಖರೀದಿ ಮಾಡಿದೆ. ಎಸ್‌…. ಸದ್ಯ ಬಳಕೆಯಲ್ಲಿಲ್ಲದ ಒಟ್ಟು 81 ಸೋವಿಯತ್‌ ಕಾಲದ ಯುದ್ಧ ವಿಮಾನಗಳನ್ನ ಅಮೆರಿಕ…. ಕಝಾಕಿಸ್ತಾನ್‌ನಿಂದ ಖರೀದಿ ಮಾಡಿದೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ತನ್ನ ವಾಯು ಪಡೆಯ ಫ್ಲೀಟ್‌ಗಳ ಅಪ್‌ಗ್ರೇಡ್‌ ಮಾಡೋಕೆ ಮುಂದಾಗಿರೋ ಕಝಾಕಿಸ್ತಾನ್‌ ಒಟ್ಟು 117 ರಷ್ಯಾದ ಹಳೆಯ ಫೈಟರ್‌ ಮತ್ತು ಬಾಂಬರ್‌ ಏರ್‌ಕ್ರಾಫ್ಟ್‌ಗಳನ್ನ ಹರಾಜಿಗಿಟ್ಟಿತ್ತು. ಇದ್ರಲ್ಲಿ 1970 ಮತ್ತು 1980 ಕಾಲದಲ್ಲಿ ಬಳಕೆ ಮಾಡ್ತಿದ್ದ MiG-31 ಇಂಟರ್‌ಸೆಪ್ಟರ್ಸ್‌, MiG-27 ಫೈಟರ್‌ ಬಾಂಬರ್ಸ್‌, MiG-29 ಫೈಟರ್ಸ್‌ ಮತ್ತು Su-24 ಬಾಂಬರ್ಸ್‌ ಸೇರಿಕೊಂಡಿದ್ವು. ಇವುಗಳಿಗೆ ಒಟ್ಟು 2.26 ಮಿಲಿಯನ್‌ ಡಾಲರ್‌ ಅಂದ್ರೆ 18.26 ಕೋಟಿ ರೂಪಾಯಿ ರೇಟ್‌ನ್ನ ಫಿಕ್ಸ್‌ ಮಾಡಿ ಕಝಾಕಿಸ್ತಾನ್‌ ಹರಾಜು ಮಾಡಿದೆ. ಅಂದ್ರೆ ಒಂದು ಯುದ್ಧ ವಿಮಾನಕ್ಕೆ ಸುಮಾರು 19,300 ಡಾಲರ್‌ ಅಂದ್ರೆ 16.10 ಲಕ್ಷ ರೂಪಾಯಿ ರೇಟ್‌ ಫಿಕ್ಸ್‌ ಮಾಡಿದೆ. ಈ ಪೈಕಿ ಅಮೆರಿಕ 81 ಯುದ್ಧ ವಿಮಾನಗಳನ್ನ ಪರ್ಚೇಸ್‌ ಮಾಡಿದೆ. ಅದು ಕೂಡ ಹಳೆ ಕಾಲದ…ಈಗ ಬಳಕೆ ಮಾಡದ ಯುದ್ದ ವಿಮಾನಗಳ ಖರೀದಿಸಿದೆ ಅಂತ ಯುಕ್ರೇನ್‌ನ ಮಾಧ್ಯಮ ವರದಿ ಮಾಡಿದೆ. ಆದ್ರೆ ಈ ಖರೀದಿ ಹಿಂದೆ ಅಮೆರಿಕದ ಉದ್ದೇಶವೇನು ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಆದ್ರೆ ಇವುಗಳನ್ನ ಯುಕ್ರೇನ್‌ನಲ್ಲಿ ಬಳಸಲಾಗುತ್ತೆ ಅಂತ ಊಹಿಸಲಾಗ್ತಿದೆ ಅಷ್ಟೇ.

-masthmagaa.com

Contact Us for Advertisement

Leave a Reply