ಐತಿಹಾಸಿಕ GE ಜೆಟ್‌ ಇಂಜಿನ್‌ ಒಪ್ಪಂದಕ್ಕೆ ಅಸ್ತು ಎಂದ ಅಮೆರಿಕ ಸಂಸತ್ತು!

masthmagaa.com:

ಭಾರತ ಹಾಗೂ ಅಮೆರಿಕ ನಡುವಿನ GE ಜೆಟ್‌ ಇಂಜಿನ್‌ ಒಪ್ಪಂದಕ್ಕೆ ಅಮೆರಿಕ ಸಂಸತ್ತು ಒಪ್ಪಿಗೆ ನೀಡಿದೆ. ಈ ಒಪ್ಪಂದವನ್ನ ಮುಂದುವರೆಸಲು ಯಾವುದೇ ಆಕ್ಷೇಪವಿಲ್ಲ ಅಂತ ಅಮೆರಿಕ ಕಾಂಗ್ರೆಸ್‌ ಹೇಳಿದೆ. ಶಾಸನ ಸಭೆಯ ಕಡೆಯಿಂದ ಈ ವಿಷಯಕ್ಕೆ ಒಪ್ಪಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಮಾರಾಟಕ್ಕೆ ಅನುಮೋದನೆ ಸಿಕ್ಕಿತ್ತು. ಆದರೆ ಪ್ರೊಸೆಸ್‌ ಪ್ರಕಾರ, ಈ ಬಗ್ಗೆ ಸದನ ಹಾಗೂ ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಜುಲೈ 28ರಂದು ರಕ್ಷಣಾ ಇಲಾಖೆ ಅಧಿಸೂಚನೆ ನೀಡಿದೆ. ಈ ಅಧಿಸೂಚನೆ ನೀಡಿದ ಬಳಿಕ ಅಮೆರಿಕ ಸಂಸತ್ತಿನ ಪ್ರತಿನಿಧಿಗಳು ಅಥ್ವಾ ಸೆನೆಟ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸದೇ ಇದ್ದರೆ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗುತ್ತದೆ. ಇದುವರೆಗೆ ಯಾವುದೇ ಆಕ್ಷೇಪ ಬಂದಿಲ್ಲ, ಆದ್ರಿಂದ ಈ ಒಪ್ಪಂದದ ಕುರಿತು ಬೈಡನ್ ಆಡಳಿತ ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು ಅಂತ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಂದ್ಹಾಗೆ ಸೆಪ್ಟೆಂಬರ್ ನಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಉಭಯ ದೇಶಗಳು ಒಪ್ಪಂದವನ್ನ ಕಾರ್ಯಗತಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಇನ್ನು ಜೆಟ್‌ ಇಂಜಿನ್‌ ಟೆಕ್ನಾಲಜಿಯನ್ನ ಅಮೆರಿಕ ಕಿರೀಟದ ಆಭರಣದ ರೀತಿ ಪರಿಗಣಿಸುತ್ತೆ ಅಂದ್ರೆ ಅಷ್ಟು ಪ್ರಾಮುಖ್ಯತೆ ನೀಡುತ್ತೆ. ಅಲ್ದೆ ಅಮೆರಿಕ ತನ್ನ ಯಾವುದೇ ಮಿತ್ರರಾಷ್ಟ್ರಗಳ ಜೊತೆಗೂ ಈ ಟೆಕ್ನಾಲಜಿಯನ್ನ ಶೇರ್‌ ಮಾಡಿಲ್ಲ. ಆದ್ರೆ ಭಾರತಕ್ಕೆ ನೀಡಲು ಒಪ್ಪಿಕೊಂಡಿದೆ. ಹೀಗಾಗಿ ಭಾರತಕ್ಕೆ ಈ ಒಪ್ಪಂದ ಸಾಕಷ್ಟು ಮಹತ್ವದ್ದಾಗಿದೆ.

-masthmagaa.com

Contact Us for Advertisement

Leave a Reply