ಅಮೆರಿಕದ ಡ್ರೋನ್‌ನ್ನ ಹೊಡೆದುರುಳಿಸಿದ ರಷ್ಯಾದ Su-27 ಜೆಟ್!

masthmagaa.com:

ಇಷ್ಟು ದಿನ ಅಮೆರಿಕ ವಿರುದ್ದ ಕೇವಲ ಮಾತಿನ ಮೂಲಕ ದಾಳಿ ಮಾಡ್ತಿದ್ದ ರಷ್ಯಾ, ಇದೀಗ ಅಮೆರಿಕದ ಮಿಲಿಟರಿ ಡ್ರೋನ್‌ ಒಂದನ್ನ ನಾಶ ಪಡಿಸಿ ಪರಿಸ್ಥಿತಿಯನ್ನ ತೀವ್ರಗೊಳಿಸಿದೆ. ರಷ್ಯಾದ Su-27 ಫೈಟರ್‌ ಜೆಟ್‌ ಅಮೆರಿಕದ ಮಿಲಿಟರಿ ಡ್ರೋನ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ನಮ್ಮ MQ-9 ರೀಪರ್ ಮಿಲಿಟರಿ ಡ್ರೋನ್‌ ಅಂತಾರಾಷ್ಟ್ರೀಯ ಜಲ ಪ್ರದೇಶದ ಮೇಲೆ ದಿನಾಲೂ ಹಾರಾಟ ನಡೆಸುತ್ತಿತ್ತು. ಈ ಸಮಯದಲ್ಲಿ ರಷ್ಯಾದ 2 Su ಜೆಟ್‌ಗಳು ಉದ್ದೇಶಪೂರ್ವಕವಾಗಿ ಡ್ರೋನ್‌ ಮೇಲೆ ಇಂಧನ ಸುರಿದಿವೆ. ಬಳಿಕ ಡ್ರೋನ್ ಮುಂದೆ ಬಂದು ಡಿಕ್ಕಿ ಹೊಡೆದಿವೆ. ಆಗ ಡ್ರೋನ್‌ ಕಪ್ಪು ಸಮುದ್ರಕ್ಕೆ ಬಿದ್ದು ಸಂಪೂರ್ಣ ಹಾನಿಗೀಡಾಗಿದೆ ಅಂತ ಅಮೆರಿಕ ತಿಳಿಸಿದೆ. ಡ್ರೋನ್‌ನ ಹೊಡೆದುರಳಿಸಿರೋದು ಅಸುರಕ್ಷಿತ ಹಾಗೂ ಅನ್‌ಪ್ರೋಫೆಶನಲ್‌ ನಡೆ ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ವಕ್ತಾರ ನೆಡ್‌ ಪ್ರೈಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಅಮೆರಿಕದಲ್ಲಿರೊ ರಷ್ಯಾದ ರಾಯಭಾರಿಯನ್ನ ಮಾತುಕತೆಗೆ ಕರೆಯಲಾಗಿದೆ. ಅಲ್ದೇ ಈ ವಿಷಯದ ಬಗ್ಗೆ ನಾವು ರಷ್ಯಾದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಅಂತ ಅಮರಿಕ ಹೇಳಿದೆ. ಆದ್ರೆ ರಷ್ಯಾ ಮಾತ್ರ ಡ್ರೋನ್‌ ಕಪ್ಪು ಸಮುದ್ರಕ್ಕೆ ಬಿದ್ದಿರೋದ್ರಲ್ಲಿ ತನ್ನ ಪಾತ್ರವಿಲ್ಲ‌ ಅಂತ ಅಮೆರಿಕದ ಆರೋಪಗಳನ್ನ ತಿರಸ್ಕರಿಸಿದೆ. ಜೊತೆಗೆ ಅಮೆರಿಕದ ಡ್ರೋನ್‌ ಉದ್ದೇಶಪೂರ್ವಕವಾಗಿ ಹಾಗೂ ಪ್ರಚೋದನಾತ್ಮಕವಾಗಿ ರಷ್ಯಾದ ಭೂಭಾಗದ ಕಡೆಗೆ ಚಲಿಸ್ತಿತ್ತು. ನಮ್ಮ ಬಾರ್ಡರ್‌ಗೆ ಹತ್ತಿರದಲ್ಲಿ ನಡೆಯುವ ಈ ರೀತಿ ಕ್ರಮಗಳನ್ನ ಅಕ್ಸೆಪ್ಟ್‌ ಮಾಡೋಕೆ ಆಗಲ್ಲ. ನಮ್ಮ ಸೇನಾ ಪಡೆ ಹಾಗೂ ಪ್ರದೇಶದ ಮೇಲೆ ಯುಕ್ರೇನ್‌ ದಾಳಿ ಮಾಡೋಕೆ ಬೇಕಾದ ಮಾಹಿತಿಯನ್ನ ಅಮೆರಿಕ ಕಲೆಕ್ಟ್‌ ಮಾಡ್ತಿದೆ ಅಂತ ರಷ್ಯಾ ಆರೋಪಿಸಿದೆ. ಜೊತೆಗೆ ಡ್ರೋನ್‌ ಜೊತೆ ನಮ್ಮ ಜೆಟ್ ಡಿಕ್ಕಿ ಹೊಡೆದೇ ಇಲ್ಲ ಅಂತ ಹೇಳಿದೆ. ಅಂದ್ಹಾಗೆ ಯುಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಿನಿಂದ ರಷ್ಯಾದ ವಿರುದ್ದವಾಗಿ ಅಮೆರಿಕ ಯುಕ್ರೇನ್‌ಗೆ ಸೇನಾ ನೆರವು, ಮಾನವೀಯ ನೆರವನ್ನ ಕೊಡ್ತಾ ಬಂದಿದೆ. ಯುಕ್ರೇನ್‌ ಬೆನ್ನಿಗೆ ನಿಂತು ಅಮೆರಿಕವೇ ರಷ್ಯಾ ವಿರುದ್ದ ಯುದ್ದ ಮಾಡ್ತಿದೆ ಅಂತ ವಿಶ್ಲೇಷಿಸಲಾಗ್ತಿದೆ. ಇತ್ತ ರಷ್ಯಾ ಕೂಡ ಪದೇ ಪದೇ ಯುಕ್ರೇನ್‌ಗೆ ಸಹಾಯ ಮಾಡಬೇಡಿ, ಇಲ್ಲ ಅಂದ್ರೆ ಪರಿಣಾಮ ಸರಿ ಇರಲ್ಲ ಅಂತ ಬೆದರಿಕೆ ಹಾಕ್ತಾನೆ ಬಂದಿದೆ. ಸೋ ಈಗಾಗಲೇ ಉಭಯ ದೇಶಗಳ ನಡುವೆ ಸಾಕಷ್ಟು ವೈರತ್ವ ಇದೆ. ಇದರ ಮಧ್ಯೆ ಇದೀಗ ನೇರವಾಗಿ ಮೊದಲ ಬಾರಿಗೆ ಅಮೆರಿಕದ ಡ್ರೋನ್‌ ಅನ್ನೇ ರಷ್ಯಾ ಹೊಡೆದುರಳಿಸಿರೋದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಉದ್ವಿಗ್ನ ವಾತಾವರಣ ಸೃಷ್ಠಿಮಾಡಿದೆ.

-masthmagaa.com

Contact Us for Advertisement

Leave a Reply