ರಷ್ಯಾ ಜೊತೆ ಸಹಜ ವ್ಯಾಪಾರಕ್ಕೂ ಅಮೆರಿಕ ಗುಡ್​​ಬೈ! ಮುಂದೇನು?

masthmagaa.com:

ಅಮೆರಿಕ ರಷ್ಯಾ ಜೊತೆ ಮಿಲಿಟರಿ ಕಾದಾಟಕ್ಕೆ ಇಳಿದೇ ಇದ್ರೂ ಆರ್ಥಿಕವಾಗಿ ರಷ್ಯಾ ಮತ್ತು ಪುಟಿನ್​ಗೆ ಗಾಯ ಮಾಡೋ ಕೆಲ್ಸವನ್ನ ಮುಂದುವರಿಸಿದೆ. ಈಗ ಅಂಥದ್ದೇ ಬೆಳವಣಿಗೆಯಲ್ಲಿ ರಷ್ಯಾ ಜೊತೆಗಿನ ಸಹಜ ವ್ಯಾಪಾರ ಸಂಬಂಧಕ್ಕೆ ಅಮೆರಿಕ ಗುಡ್​​ಬೈ ಹೇಳಿದೆ. ಇದುವರೆಗೆ ಅಮೆರಿಕದ ವ್ಯಾಪಾರಿ ಸಂಬಂಧದಲ್ಲಿ ರಷ್ಯಾ ‘ಮೋಸ್ಟ್​ ಫೇವರ್ಡ್​ ನೇಷನ್​’ ಅನ್ನೋ ಪಟ್ಟ ಗಿಟ್ಟಿಸಿಕೊಂಡಿತ್ತು. ರಷ್ಯಾ ಒಂದೇ ಅಲ್ಲ ಬೇರೆ ದೇಶಗಳು ಕೂಡ ಇವೆ. ಆದ್ರೀಗ ರಷ್ಯಾಕ್ಕಿದ್ದ ಈ ಪಟ್ಟವನ್ನ ತೆಗೆದುಹಾಕುವ ಕಾನೂನನ್ನ ಅಮೆರಿಕದ ಕಾಂಗ್ರೆಸ್​​ ಪಾಸ್​ ಮಾಡಿದೆ. ಇದರನ್ವಯ, ಇನ್ಮುಂದೆ ರಷ್ಯಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಮೆರಿಕ ಹೆಚ್ಚೆಚ್ಚು ಟ್ಯಾಕ್ಸ್ ಹಾಕುವ ನಿರ್ಧಾರಕ್ಕೆ ಬೈಡೆನ್​ ಸಹಿ ಹಾಕಬಹುದಾಗಿದೆ. ಸಹಿ ಹಾಕಿದ್ರೆ ರಷ್ಯಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಅಮೆರಿಕದಲ್ಲಿ ಗಗನಕ್ಕೇರಲಿದೆ.

-masthmagaa.com

Contact Us for Advertisement

Leave a Reply