ಭಾರತಕ್ಕೆ ಅಮೆರಿಕ ಮೋಸ! POKಗೆ USA ಸಿಕ್ರೇಟ್‌ ಭೇಟಿ!

masthmagaa.com:

ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಂಘರ್ಷ ತೀವ್ರವಾಗ್ತಿರೊ ಹೊತ್ತಲ್ಲೇ, ಇತ್ತ ಅಮೆರಿಕ ಕೂಡ ಭಾರತವನ್ನ ಕೆಣಕೊ ಕೆಲಸ ಮಾಡ್ತಿದೆ. ವಿಶ್ವದ ದೊಡ್ಡಣ್ಣ ಅಂತ ಕರೆದುಕೊಳ್ಳೊ ಅಮೆರಿಕದ ನರಿಬುದ್ದಿ ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣವಾಗಿದೆ. ಒಂದ್‌ ಕಡೆ ಭಾರತದ ಅತ್ಯಾಪ್ತ ಮಿತ್ರನಂತೆ ಪೋಸ್‌ ಕೊಡೊ ಅಮೆರಿಕ, ಮತ್ತೊಂದ್‌ ಕಡೆ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಸಿಕ್ರೇಟ್‌ ಆಗಿ ಭೇಟಿ ಮಾಡಿದೆ. ಪಾಕಿಸ್ತಾನದಲ್ಲಿರೊ ಅಮೆರಿಕದ ರಾಯಭಾರಿ ಡೊನಾಲ್ಡ್‌ ಬ್ಲೋಮ್‌ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ 6 ದಿನದ ಪ್ರವಾಸ ಕೈಗೊಂಡಿರೋ ಮಾಹಿತಿ ಈಗ ಬೆಳಕಿಗೆ ಬಂದಿದೆ. ಗಿಲ್‌ಗಿಟ್‌-ಬಾಲ್ಟಿಸ್ತಾನ್‌ ಪ್ರದೇಶಕ್ಕೆ ಭೇಟಿ ನೀಡಿದ್ದ ಬ್ಲೋಮ್‌, ಅಲ್ಲಿನ ಸ್ಥಳೀಯ ಪ್ರತಿನಿಧಿಗಳ ಜೊತೆ ಹಾಗೂ ಅಲ್ಲಿನ ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. ಇವರ ಭೇಟಿಯನ್ನ ಪಾಕ್‌ ಹಾಗೂ ಅಮೆರಿಕದ ರಾಯಭಾರ ಕಚೇರಿಗಳು ಸಿಕ್ರೇಟ್‌ ಆಗಿ ಇಟ್ಟಿದ್ವು ಅಂತ ಆರೋಪ ಕೇಳಿ ಬಂದಿದೆ. ಇವರ ಭೇಟಿ ಕುರಿತ ಅಧಿಕೃತ ಮಾಹಿತಿ ಗಿಲ್‌ಗಿಟ್‌-ಬಾಲ್ಟಿಸ್ತಾನ್‌ದ ಡೆಪ್ಯೂಟಿ ಸ್ಪೀಕರ್‌ ಕಚೇರಿಯ ಹೇಳಿಕೆಯಲ್ಲಿ ಮಾತ್ರ ಬಂದಿದೆ. ಇದರ ಬೆನ್ನಲ್ಲೇ ಇವರ ಭೇಟಿ ಕುರಿತು ಅಲ್ಲಿನ ವಿಪಕ್ಷ ನಾಯಕ ಕಾಜೀಮ್‌ ಮೆಸಮ್‌ ಪ್ರಶ್ನಿಸಿದ್ದಾರೆ. ಅಮೆರಿಕ ರಾಯಭಾರಿಯ ರಹಸ್ಯ ಚಟುವಟಿಕೆಗಳು ಇಲ್ಲಿ ಅನೇಕ ಪ್ರಶ್ನೆಗಳನ್ನ ಹುಟ್ಟಿ ಹಾಕಿವೆ. ಗಿಲ್‌ಗಿಟ್‌-ಬಾಲ್ಟಿಸ್ತಾನ್‌ಕ್ಕೆ ಯಾವುದೇ ದೇಶದ ರಾಯಭಾರಿ ಭೇಟಿ ಮಾಡಬೇಕು ಅಂದ್ರೆ ಅದಕ್ಕೆ ಪ್ರೊಸಿಜರ್‌ ಇದೆ. ಆದ್ರೆ ಅಮೆರಿಕ ರಾಯಭಾರಿಯ ಸಿಕ್ರೇಟ್‌ ಭೇಟಿ, ಹಲವು ಅನುಮಾನಗಳಿಗೆ ಕಾರಣವಾಗಿದೆ ಅಂತ ಆರೋಪಿಸಿದ್ದಾರೆ. ಜೊತೆಗೆ ರಾಯಭಾರಿ ಬ್ಲೋಮ್‌ ಗಿಲ್‌ಗಿಟ್-ಬಾಲ್ಟಿಸ್ತಾನ್‌ ಭೇಟಿಗೂ ಮುನ್ನ ಚೀನಾದ China–Pakistan Economic Corridor ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡ್ತಿರೊ ಮೂಲಸೌಕರ್ಯಗಳ ಸ್ಥಳಕ್ಕೂ ಭೇಟಿ ನೀಡಿದ್ದಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಸಿಕ್ರೇಟ್‌ ಭೇಟಿ ಅಮೆರಿಕ ಡಬಲ್‌ ಗೇಮ್‌ ಆಡ್ತಿರೊದನ್ನ ತೋರಿಸ್ತಿದೆ ಅಂತ ಹೇಳಲಾಗ್ತಿದೆ. ವಿಶ್ವ ಗುರುವಾಗುತ್ತ ಬೆಳಿತಾಯಿರೊ ಭಾರತದ ಸ್ನೇಹ ಅಮೆರಿಕಗೆ ಬೇಕು. ಭಾರತವನ್ನ ಬಿಟ್ಟುಕೊಡುವಂತಿಲ್ಲ. ಭಾರತಕ್ಕೆ ಸೇನಾ ತಂತ್ರಜ್ಞಾನವನ್ನ ಕೊಡೋಕೆ ಕೂಡ ಅಮೆರಿಕ ಮುಂದಾಗಿದೆ. ಆದ್ರೆ ಇತ್ತ ಭಾರತ ಅಮೆರಿಕ ಶತ್ರು ರಾಷ್ಟ್ರವಾದ ರಷ್ಯಾದ ಜೊತೆ ಒಳ್ಳೆ ಸ್ನೇಹ ಹೊಂದಿದೆ. ಯುಕ್ರೇನ್‌ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ರಷ್ಯಾವನ್ನ ಓಪನ್‌ ಆಗಿ ಖಂಡಿಸಿಲ್ಲ. ಹಾಗೇ ಯುಕ್ರೇನ್‌ ಪರವಾಗಿ ಧ್ವನಿ ಕೂಡ ಎತ್ತಿಲ್ಲ. ಬ್ಯಾಲೆನ್ಸಿಂಗ್‌ ಆಗಿ ಭಾರತ ತನ್ನ ಸಂಬಂಧಗಳನ್ನ ಮೆಂಟೇನ್‌ ಮಾಡ್ತಿದೆ. ಈ ನಡುವೆ ಅಮೆರಿಕ ಮತ್ತೆ ಪಾಕಿಸ್ತಾನದ ಜೊತೆ ಸೇರಿ ಭಾರತದ ವಿರುದ್ಧವಾಗಿ PoKಗೆ ಸಿಕ್ರೇಟ್‌ ಆಗಿ ಭೇಟಿ ನೀಡಿರೋದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಅಮೆರಿಕದ ರಾಯಭಾರಿ PoKಗೆ ಭೇಟಿ ಕೊಟ್ಟಿರೋದ್ರಿಂದ ಅಧಿಕೃತವಾಗಿ ಪಾಕಿಸ್ತಾನದ ಭಾಗ ಅಂತ ಒಪ್ಕೊಂಡಂತೆ ಆಗುತ್ತೆ. ಚೀನಾ ಕೂಡ ತೈವಾನ್‌ ವಿಚಾರದಲ್ಲಿ ಅಮೆರಿಕದ ಮೇಲೆ ಸಿಟ್ಟಾಗೋಕೆ ಇದೇ ಕಾರಣ. ಸೋ ಇದೀಗ ಅಮೆರಿಕದ ಕ್ರಮಕ್ಕೆ ಭಾರತ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೊ ಕಾದು ನೋಡಬೇಕು.

-masthmagaa.com

Contact Us for Advertisement

Leave a Reply