ಯುಕ್ರೇನ್‌ಗೆ ಪಾಶ್ಚೀಮಾತ್ಯರ ದಂಡು! ಯಾರು ಯಾರು ಬಂದಿದ್ರು ಗೊತ್ತಾ?

masthmagaa.com:

ಸಂಘರ್ಷದ ಮಧ್ಯೆದಲ್ಲಿಯೇ ಯುದ್ದಪೀಡಿತ ಯುಕ್ರೇನ್‌ಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು, ಅಮೆರಿಕದ ಪ್ರಥಮ ಮಹಿಳೆ, ಅಂದ್ರೆ ಅಧ್ಯಕ್ಷ ಜೋ ಬೈಡೆನ್‌ ಪತ್ನಿ ಜಿಲ್‌ ಬೈಡೆನ್‌ ಭೇಟಿ ನೀಡಿ ಪರಿಸ್ಥಿತಿಯನ್ನ ಅವಲೋಕಿಸಿದ್ದಾರೆ. ಮೊದಲಿಗೆ ಕೆನಡಾ ಪ್ರಧಾನಿ ಯುಕ್ರೇನ್‌ಗೆ ಭೇಟಿ ನೀಡಿದ್ದು ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತಾಡಿದ ಅವ್ರು ʻಯುಕ್ರೇನ್‌ನಲ್ಲಿ ರಷ್ಯಾ ಮಾಡಿದ ಯುದ್ದಾಪರಾಧಗಳಿಗೆ ಪುಟಿನ್‌ ಅವರೇ ಹೊಣೆ, ಇದಕ್ಕೆಲ್ಲಾ ಅವರು ಬೆಲೆ ತೆರಲೇಬೇಕುʼ ಅಂತ ಹೇಳಿದ್ದಾರೆ. ಇನ್ನು ಜಿಲ್‌ ಬೈಡೆನ್‌ ಕೂಡ ಝೆಲೆನ್ಸ್ಕಿ ಪತ್ನಿ ಒಲೆನಾ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಿದ್ದು ಯುದ್ದ ನಿಲ್ಲಿಸಬೇಕು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply