ಅಮೆರಿಕ ಸಂಸತ್ತಿನಲ್ಲಿ ಟಿಕ್‌ಟಾಕ್‌ ಬ್ಯಾನ್‌ಗೆ ಬಿಲ್‌ ಪಾಸ್‌!

masthmagaa.com:

ಭಾರತದ ನಂತ್ರ ಈಗ ಅಮೆರಿಕದಲ್ಲೂ ಚೀನಿ ಆ್ಯಪ್‌ ಟಿಕ್‌ಟಾಕ್‌ಗೆ ಮೂಗುದಾರ ಹಾಕಲಾಗ್ತಿದೆ. ಅಮೆರಿಕ ಟಿಕ್‌ಟಾಕ್‌ ಬ್ಯಾನ್‌ಗೆ ಮುಂದಾಗಿದೆ. ಅಮೆರಿಕದ ಯುವಜನತೆಯಲ್ಲಿ ಟಿಕ್‌ಟಾಕ್‌ ತುಂಬಾ ಪಾಪುಲರ್.‌ ಸುಮಾರು 170 ಮಿಲಿಯನ್‌ ಅಂದ್ರೆ 17 ಕೋಟಿ ಜನ ಫಾಲೋ ಮಾಡ್ತಾರೆ. ಆದ್ರೆ ಚೀನಾ ಇದನ್ನೇ ಅಡ್ವಾಂಟೇಜ್‌ ಆಗಿ ತಗೊಂಡು ಅಮೆರಿಕದಲ್ಲಿ ತನ್ನ ಪ್ರೊಪಗಂಡಾ ಹರಡೋಕೆ ಬಳಸ್ತಿದೆ. ಅಮೆರಿಕದ ಸೊಸೈಟಿಯನ್ನ ಕಂಟ್ರೋಲ್‌ ಮಾಡ್ತಿದೆ ಅನ್ನೋ ಆರೋಪ ಇತ್ತು. ಹೀಗಾಗಿ ಅಮೆರಿಕ ಸರ್ಕಾರ ಈಗ ಟಿಕ್‌ಟಾಕ್‌ ಮುಂದೆ ಎರಡು ಆಪ್ಷನ್‌ ಇಟ್ಟಿದೆ. ಒಂದು ಚೀನಾದ ಪೋಷಕ ಕಂಪನಿ ByteDance ನಿಂದ ಟಿಕ್‌ಟಾಕ್‌ ದೂರವಿರ್ಬೇಕು. ಇಲ್ಲಾ ಅಮೇರಿಕದಾದ್ಯಂತ ಬ್ಯಾನ್‌ಗೆ ಗುರಿಯಾಗ್ಬೇಕು… ಈ ರೀತಿ ಬಿಲ್‌ ಒಂದನ್ನ ಅಮೆರಿಕದ ಸಂಸತ್ತು ಈಗ ಪಾಸ್‌ ಮಾಡಿದೆ. ಮತ್ತೊಂದು ಬಿಲ್‌ನಲ್ಲಿ ಚೀನಾಗೆ ಕೌಂಟರ್‌ ಕೊಡೋಕೆ ಅಭಿವೃದ್ಧಿ ಹೊಂದುತ್ತಾ ಇರೋ ದೇಶಗಳಲ್ಲಿ ಸಬ್‌ಮರೀನ್‌ ಇನ್ಫ್ರಾಸ್ಟ್ರಕ್ಚರ್‌ಗಳಂತಹ ಯೋಜನೆಗಳ ಮೇಲೆ 8 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 66.4 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡ್ತಿದೆ.

-masthmagaa.com

Contact Us for Advertisement

Leave a Reply