ಸಾಲದ ಮಿತಿ ಹೆಚ್ಚಿಸಲು ಮಸೂದೆಗೆ ಮತ ಹಾಕಿದ ಅಮೆರಿಕ ಕೆಳಮನೆ!

masthmagaa.com:

ಸಾಲದ ಸಂಕಷ್ಟದಲ್ಲಿ ಸಿಲುಕಿರುವ ಜಗತ್ತಿನ ದೊಡ್ಡಣ್ಣ ಅಂತ ಕರೆದುಕೊಳ್ಳೊ ಅಮೆರಿಕ ತನ್ನ ಸಾಲದ ಮಿತಿಯನ್ನ ಹೆಚ್ಚಿಸಿಕೊಳ್ಳುವ ಮಸೂದೆಯನ್ನ ಅಲ್ಲಿನ ಕೆಳಮನೆಯಲ್ಲಿ ಪಾಸ್‌ ಮಾಡಿದೆ. ಇತ್ತೀಚೆಗೆ ಸಾಲದ ಮಿತಿಯನ್ನ ಹೆಚ್ಚಿಸುವ ಸಂಬಂಧ ಅಮೆರಿಕದ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ನ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವ್ರೊಂದಿಗೆ ಅಧ್ಯಕ್ಷ ಜೋ ಬೈಡನ್‌ ಮಾತುಕತೆ ನಡೆಸಿದ್ರು. ಈ ವೇಳೆ ಸಾಲದ ಮಿತಿಯನ್ನ ಹೆಚ್ಚಿಸೋಕೆ ಮೆಕಾರ್ಥಿ ಒಪ್ಪಿಗೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಇದೀಗ ಕೆಳಮನೆಯಲ್ಲಿ ಈ ಮಸೂದೆಗೆ ಮತ ಹಾಕುವ ಮೂಲಕ ಪಾಸ್‌ ಮಾಡಲಾಗಿದೆ. ಇನ್ನು ಅಮೆರಿಕವನ್ನ ಮತ್ತೆ ಟ್ರ್ಯಾಕ್‌ಗೆ ತರಲು Fiscal Responsibility Act ಅನ್ನ ಪಾಸ್‌ ಮಾಡೋದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಅಂತ ಮೆಕಾರ್ಥಿ ಹೇಳಿದ್ದಾರೆ. ಇನ್ನು ಪ್ಯಾಂಡೆಮಿಕ್‌ ನಂತ್ರದ ಆರ್ಥಿಕ ರಿಕವರಿಗಾಗಿ ದ್ವಿಪಕ್ಷೀಯವಾಗಿ ಮಸೂದೆಯನ್ನ ಪಾಸ್‌ ಮಾಡಿರೋದು ನಿರ್ಣಾಯಕ ಸ್ಟೆಪ್‌ ಅಂತ ಬೈಡನ್‌ ಹೊಗಳಿದ್ದಾರೆ.

-masthmagaa.com

Contact Us for Advertisement

Leave a Reply