ಅಮೆರಿಕದ 2023ರ ಮಾನವ ಹಕ್ಕುಗಳ ವರದಿಯಲ್ಲಿ ಭಾರತಕ್ಕೆ ಟೀಕೆ!

masthmagaa.com:

ಅಮೆರಿಕ ಹೊರಹಾಕಿರೋ 2023ರ ವಿಶ್ವದ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನ ಹೈಲೈಟ್‌ ಮಾಡಲಾಗಿದೆ. ಇದನ್ನ ಬಗೆಹರಿಸುವಲ್ಲಿ ಭಾರತ ಸರ್ಕಾರ ಸೋತೋಗ್ಬಿಟ್ಟಿದೆ ಅಂತ ಟೀಕಿಸಿದೆ. ಅಲ್ದೆ ಭಾರತದಲ್ಲಿ ಪತ್ರಕರ್ತರ ಮೇಲೆ ಹಿಂಸಾಚಾರಗಳು ನಡೀತಿವೆ… ಬ್ರಿಟನ್‌ ಮೂಲದ BBC ಕಚೇರಿಗೆ, ತೆರಿಗೆ ಅಧಿಕಾರಿಗಳು ನುಗ್ಗಿ ದಾಳಿ ಮಾಡಿದ್ರು. ಗಡಿ ದಾಟಿ ಭಾರತ ದಬ್ಬಾಳಿಕೆ ನಡೆಸಿದೆ…. ಕೆನಡಾದಲ್ಲಿ ಸಿಖ್ ಆಕ್ಟಿವಿಸ್ಟ್‌ ಹರ್ದೀಪ್‌ ಸಿಂಗ್‌ ನಿಜ್ಜರ್‌ನ್ನ ಹತ್ಯೆ ಮಾಡಿ ಮಾನವ ಹಕ್ಕುಗಳನ್ನ ಭಾರತ ಉಲ್ಲಂಘಿಸಿದೆ ಅಂತ ಅಮೆರಿಕ ಭಾರತದ ವಿರುದ್ದ, ಭಾರತದ ಸರ್ಕಾರದ ವಿರುದ್ದ ರಿಪೋರ್ಟ್‌ ಮಾಡಿದೆ. ಇಲ್ಲಿ ಸರ್ಕಾರ ಸಮರ್ಥವಾಗಿದೆಯೋ ಅಥವಾ ಇಲ್ವೋ ಅನ್ನೋದು ಒಂದು ಕಡೆ ಇರಲಿ. ಆದ್ರೆ ಭಾರತ ನುಗ್ಗಿ ಹೊಡೀತಿದೆ ಅಂತ ಹೇಳೋದಕ್ಕೆ ಅಮೆರಿಕಗೆ ಯಾವ ನೈತಿಕತೆ ಇದೆ ಅನ್ನೋದನ್ನ ಇಲ್ಲಿ ಅಮೆರಿಕ ಹೇಳಬೇಕು. ಸಿಐಎ ಮಾಡೋದೇನು? ಒಂದು ಕಡೆ ಇಡೀ ಮಿಡಲ್‌ಈಸ್ಟ್‌ನ್ನ ಆಟದ ಮೈದಾನ ಮಾಡ್ಕೊಂಡು ಅಲ್ಲಿ ಅಶಾಂತಿ ಸೃಷ್ಟಿಸಿ, ದಿನಬೆಳಗಾದ್ರೆ ಅವರ ಮನೆಲೀ ಏನಾಗ್ತಿದೆ ಇವರ ಮನೆಲೀ ಏನ್‌ ನಡೀತಿದೆ ಅಂತ ನೋಡಿನೇ ಎರಡುವರೆ ಶತಮಾನ ಕಳೆದಿರೋ ದೇಶ ಅಮೆರಿಕ..ಈಗ ಭಾರತದ ವಿಚಾರವಾಗಿ ಮಾತಾಡ್ತಿದೆ. ಅಷ್ಟೇ ಅಲ್ಲ ಅಮೆರಿಕ ಎಂಥಾ ಖತನಾರ್ಕ್‌ ದೇಶ ಅಂದ್ರೆ ಜಮ್ಮುಕಾಶ್ಮೀರದಲ್ಲಿ ಇಬ್ಬರು ಪಾಕ್‌ ಉಗ್ರರು ಗುಂಡಿನ ದಾಳಿ ನಡೆಸಿ ಸರ್ಕಾರಿ ನೌಕರನನ್ನ ಹತ್ಯೆ ಮಾಡಿದ್ದಾರೆ. ಹತ್ಯೆಯಾದವರನ್ನ ಮೊಹಮ್ಮದ್‌ ರಜಾಕ್‌ ಅಂತ ಗುರುತಿಸಲಾಗಿದೆ. ಆದ್ರೆ ಈ ಉಗ್ರರು ಬಳಸಿರೋದು ಅಮೆರಿಕ ನಿರ್ಮಿತ M4 ರೈಫಲ್‌ ಮತ್ತು ಪಿಸ್ತೂಲ್‌ನ್ನ. ಇದನ್ನ ಪೊಲೀಸರೇ ತಿಳಿಸಿದ್ದಾರೆ. ಸೋ ಇಲ್ಲಿ ಪಾಕಿಸ್ತಾನಕ್ಕೆ ಒದಗಿಸ್ತಿರೋ ಆಯುಧಗಳು ಹೇಗೆ ಮತ್ತು ಯಾಕೆ ಬಳಕೆಯಾಗ್ತಿವೆ ಅನ್ನೋದನ್ನ ಕೂಡ ಅಮೆರಿಕ ಇಲ್ಲಿ ಉತ್ತರ ಕೊಡಬೇಕಾಗುತ್ತೆ.

-masthmagaa.com

Contact Us for Advertisement

Leave a Reply