ಪಾಕಿಸ್ತಾನದ ಪ್ರಚೋದನೆಗೆ ಮೋದಿ ನೇತೃತ್ವದ ಭಾರತದ ಸೇನೆಯಿಂದ ಉತ್ತರ: ಅಮೆರಿಕ ಇಂಟಲಿಜೆನ್ಸ್

masthmagaa.com:

ಭಾರತ ಹಾಗೂ ಪಾಕಿಸ್ತಾನದ ನಡುವೆ ಗಡಿ ಸಂಘರ್ಷ ಉದ್ವಿಗ್ನವಾಗ್ತಾನೇ ಇದೆ. ಪಾಕಿಸ್ತಾನದಿಂದ ಯಾವುದೇ ಪ್ರಚೋದನೆ ಬಂದ್ರೂ ಭಾರತ ಪಾಕಿಸ್ತಾನಕ್ಕೆ ಸೇನೆ ಮೂಲಕ ಉತ್ತರ ಕೊಡಲಿದೆ ಅಂತ ಅಮೆರಿಕ ಹೇಳಿದೆ. ಅಮೆರಿಕದ ಇಂಟಲಿಜೆನ್ಸ್‌ ಅಧಿಕಾರಿಗಳು ಅಲ್ಲಿನ ಸಂಸತ್ತಿಗೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಇದನ್ನ ಉಲ್ಲೇಖ ಮಾಡಲಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಹಾಳಾಗ್ತಾನೇ ಇದ್ದು ಎರಡು ದೇಶಗಳು ತಮ್ಮ ಸೇನೆಯನ್ನ ಬಲಪಡಿಸಿಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿಯನ್ನ ಹೊಂದಿವೆ. ಪಾಕಿಸ್ತಾನ, ಭಾರತ ವಿರೋಧಿ ಬಂಡುಕೋರ ಗುಂಪುಗಳಿಗೆ ಬೆಂಬಲ ಕೊಡ್ತಿರೋ ಇತಿಹಾಸವನ್ನ ಹೊಂದಿದೆ. ಹೀಗಾಗಿ ಪಾಕಿಸ್ತಾನದಿಂದ ಯಾವುದೇ ಪ್ರೊವೋಕೇಶನ್‌ ಬಂದ್ರೂ ಕೂಡ ಎರಡೂ ದೇಶಗಳ ನಡುವೆ ಮಿಲಿಟರಿ ಸಂಘರ್ಷ ಉಂಟಾಗಬೋದು. ಅದ್ರಲ್ಲೂ ಮೋದಿ ನೇತೃತ್ವದ ಭಾರತದ ಸೇನೆಯಿಂದ ಉತ್ತರ ಕೊಡುವ ಸಾಧ್ಯತೆನೇ ಹೆಚ್ಚಾಗಿದೆ ಅಂತ ಇಂಟಲಿಜೆನ್ಸ್‌ ವರದಿ ತಿಳಿಸಿದೆ. ಜೊತೆಗೆ ಈ ಎರಡೂ ನ್ಯೂಕ್ಲಿಯರ್‌ ದೇಶಗಳಾಗಿರೋದ್ರಿಂದ ಇದರ ಗಂಭೀರತೆ ಮತ್ತಷ್ಟು ಜಾಸ್ತಿ ಇದೆ ಅಂತ ಹೇಳಲಾಗಿದೆ. ಇನ್ನು ಇದೇ ವರದಿಯಲ್ಲಿ ಭಾರತ ಹಾಗೂ ಚೀನಾ ನಡುವಿನ ಗಡಿ ಗಲಾಟೆ ಬಗ್ಗೆ ಕೂಡ ತಿಳಿಸಲಾಗಿದೆ. 2020ರ ಗಲ್ವಾನ್‌ ಗಡಿ ಸಂಘರ್ಷ ಆದ್ಮೇಲೆ ಚೀನಾ ಹಾಗೂ ಭಾರತದ ನಡುವಿನ ಸಂಬಂಧ ಬಲವಂತದಿಂದ ಕೂಡಿದೆ. ಗಡಿಯಲ್ಲಿ ಉಭಯ ಸೇನೆಗಳು ಯುದ್ಧ ಸನ್ನದ್ದ ಸ್ಥಿತಿಯಲ್ಲೇ ಇವೆ. ಹೀಗಾಗಿ ಎರಡೂ ದೇಶಗಳ ನಡುವೆ ಮಿಲಿಟರಿ ಸಂಘರ್ಷ ಉಂಟಾದ್ರೆ ಅದು ಅಮೆರಿಕದ ಇಂಟ್ರಸ್ಟ್‌ಗೆ ಧಕ್ಕೆ ತರುತ್ತೆ. ಅದಕ್ಕೋಸ್ಕರ ಅಮೆರಿಕ ಈ ವಿಚಾರದಲ್ಲಿ ಮಧ್ಯೆಸ್ಥಿಕೆ ವಹಿಸಬೇಕು. ಭಾರತ ಹಾಗೂ ಚೀನಾ ನಡುವೆ ಸಂಘರ್ಷ ಕಡಿಮೆ ಮಾಡೋಕೆ ಅಮೆರಿಕ ಹಸ್ತಕ್ಷೇಪ ಮಾಡಲೇ ಬೇಕು ಅಂತ ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಭಾರತಕ್ಕೆ ಪಾಕಿಸ್ತಾನ ಹಾಗೂ ಚೀನಾದಿಂದ ಒಟ್ಟಾಗಿ ಬೆದರಿಕೆ ಇದ್ದು ಭಾರತ ಟು ಫ್ರಂಟ್‌ ವಾರ್‌ ಅಂದ್ರೆ ಇಬ್ರ ಜೊತೆಗೆ ಒಟ್ಟಿಗೆ, ಒಂದೇ ಸಮಯಕ್ಕೆ ಯುದ್ದ ಮಾಡಬೇಕಾದ ಪರಿಸ್ಥಿತಿ ಇದೆ ಅಂತ ಅಮೆರಿಕದ ಇಂಟಲಿಜೆನ್ಸ್‌ ರಿಪೋರ್ಟ್‌ ಹೇಳ್ತಾ ಇದೆ. ಇನ್ನು ರಷ್ಯಾ ಹಾಗೂ ಯುಕ್ರೇನ್‌ ಸಂಘರ್ಷದ ಕುರಿತು ಕೂಡ ಈ ವರದಿ ಮಾಹಿತಿಯನ್ನ ನೀಡಿದ್ದು, ರಷ್ಯಾ ಈಗ ನ್ಯಾಟೋ ಹಾಗೂ ಅಮೆರಿಕ ಜೊತೆಗೆ ನೇರವಾಗಿ ಸಂಘರ್ಷ ಮಾಡುವ ಯಾವುದೇ ಯೋಚನೆ ಹೊಂದಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply