ಉತ್ತರದಲ್ಲಿ ಯುದ್ಧಬೀತಿ: ಬ್ರಿಟನ್‌ಗೆ ಅಮೆರಿಕ ಅಣ್ವಸ್ತ್ರಗಳು

masthmagaa.com:

ರಷ್ಯಾ ಜೊತೆ ಉಂಟಾಗಬಹುದಾದ ಸಾಂಭವ್ಯ ಯುದ್ಧಕ್ಕೆ ಅಮೆರಿಕ ಪ್ರಿಪೇರ್‌ ಆಗ್ತಿರೋ ತರ ಕಾಣ್ತಿದೆ. ನ್ಯಾಟೋ ದೇಶಗಳ ವಿರುದ್ಧ ರಷ್ಯಾದ ಅಗ್ರೆಸಿವ್‌ ಮೈಂಡ್‌ಸೆಟ್‌ಗೆ ಕೌಂಟರ್‌ ಕೊಡೋಕೆ, ಅಮೆರಿಕ ಬ್ರಿಟನ್‌ನಲ್ಲಿ ಅಣ್ವಸ್ತ್ರಗಳನ್ನ ಇಡೋಕೆ ಸಜ್ಜಾಗಿದೆ. 15 ವರ್ಷಗಳಲ್ಲೇ ಮೊದಲ ಬಾರಿಗೆ ಅಮೆರಿಕ ಯುಕೆನಲ್ಲಿ ಅಣ್ವಸ್ತ್ರ ಇಡ್ತಾ ಇದೆ. ಆ ಮೂಲಕ ರಷ್ಯಾ ವಿರುದ್ಧ ತಮ್ಮ ಸಾಂಪ್ರಾದಾಯಿಕ ಅಲೈ ಅಥ್ವಾ ಮಿತ್ರರಾಷ್ಟ್ರದ ಜೊತೆ ಗಟ್ಟಿಯಾಗಿ ಕೈಜೋಡಿಸಿದೆ. ರಿಸೆಂಟಾಗಿ ಇಬ್ರೂ ಒಟ್ಟಿಗೆ ಯೆಮನ್‌ ಬಂಡುಕೋರರ ಮೇಲೆ ದಾಳಿ ನಡೆಸಿದ್ರು. ಈಗ ಯುಕೆನ ಸಫೋಲ್ಕ್‌ ಬಳಿಯ RAF ಲೇಕನ್‌ಹಿತ್‌ ಏರ್‌ಬೇಸ್‌ನಲ್ಲಿ ಅಮೆರಿಕ ಅಣ್ವಸ್ತ್ರಗಳನ್ನ ಇಡ್ತಾ ಇದೆ. 1945ರಲ್ಲಿ ಹಿರೋಷಿಮಾ ಮೇಲೆ ಹಾಕಿದ್ದ ಅಟೊಮಿಕ್‌ ಬಾಂಬ್‌ಗಿಂತ ಮೂರು ಪಟ್ಟು ಶಕ್ತಿಶಾಲಿ ವೆಪನ್‌ಗಳನ್ನ ಇಡೋಕೆ ಪ್ಲಾನ್‌ ಮಾಡಿದೆ. B61-12 ಹೆಸರಿನ 50ಕಿಲೋ ಟನ್‌ ಸಾಮರ್ಥ್ಯದ ಬಾಂಬ್‌ಗಳನ್ನ ಇಡಲಾಗುತ್ತೆ ಅನ್ನೋ ಸುದ್ಧಿ ಬಂದಿದೆ. ಇದನ್ನ ಬ್ರಿಟನ್‌ ಕನ್ಫರ್ಮ್‌ ಮಾಡಿಲ್ಲ ಅಷ್ಟೇ. ಸೊ ರಷ್ಯಾದ ಈಸ್ಟ್‌ ಫ್ರಂಟ್‌ನಲ್ಲಿ ಡೈರೆಕ್ಟಾಗಿ ಅಮೆರಿಕದಿಂದ ಅಟ್ಯಾಕ್‌ ಮಾಡಿದ್ರೆ, ವೆಸ್ಟ್‌ ಫ್ರಂಟ್‌ನಲ್ಲಿ ಯುಕೆ ಮೂಲಕ ದಾಳಿ ನಡೆಸೋದು ಅಮೆರಿಕ ಲೆಕ್ಕಾಚಾರ. ಯುದ್ಧ ಆಗ್ದೆ ಇದ್ರೂ ಒಂದು ಸ್ಟ್ರಾಟೆಜಿಕ್‌ ಮೂವ್‌ ಆಗಿ ಅಮೆರಿಕ ಆಯುಧಗಳನ್ನ ರಷ್ಯಾ ಸುತ್ತಾ ಸೇರಿಸ್ತಿದೆ. 2008ರಲ್ಲಿ ಕೋಲ್ಡ್‌ವಾರ್‌ ಇನ್ನೇನು ಮುಗಿದಿದೆ ಅಂತ ಅನ್ಸಿದ್ಮೇಲೆ ಅಮೆರಿಕ, ಯುಕೆನಲ್ಲಿದ್ದ ಅಣ್ವಸ್ತ್ರಗಳನ್ನ ವಾಪಸ್‌ ತಗೊಂಡಿತ್ತು. ಇದೀಗ ನ್ಯಾಟೋದ ನ್ಯೂಕ್ಲಿಯರ್‌ ಸೈಟ್ಸ್‌ ಅಥ್ವಾ ಅಣ್ವಸ್ತ್ರ ಬೇಸ್‌ಗಳನ್ನ ಅಭಿವೃದ್ಧಿ ಹಾಗೂ ಅಪ್‌ಗ್ರೇಡ್‌ ಮಾಡೋಕೆ ಈ ಕ್ರಮ ತಗೊಳ್ತಿದೆ. ಕೆಲವು ದಿನಗಳ ಹಿಂದಷ್ಟೇ ಬ್ರಿಟಿಷ್‌ ಆರ್ಮಿ ಜೆನರಲ್‌ ಸರ್‌ ಪ್ಯಾಟ್ರಿಕ್‌ ಸ್ಯಾಂಡರ್ಸ್‌, 45 ಸಾವಿರ ಮೀಸಲು ಸೈನಿಕರನ್ನ ಸಾಂಭವ್ಯ ಯುದ್ಧಕ್ಕೆ ಪ್ರಿಪೇರ್‌ ಆಗಿರಿ ಅಂದಿದ್ರು. ಕೆಲವು ಸೀನಿಯರ್‌ ನ್ಯಾಟೋ ಅಧಿಕಾರಿಗಳು ಹಾಗೂ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಕೂಡ ಈ ಬಗ್ಗೆ ಮಾತನಾಡಿದ್ರು. ಅಲ್ಲದೆ ಸ್ವೀಡನ್‌ ನ್ಯಾಟೋ ಮೆಂಬರ್‌ಶಿಪ್‌ಗೂ ಟರ್ಕಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಹಂಗೇರಿ ಅಸ್ತು ಅಂದ್ರೆ ಸ್ವೀಡನ್‌ ನ್ಯಾಟೋ ಸೇರ್ದಂಗೇನೆ. ಸ್ವೀಡನ್‌ ಕೂಡ ರಷ್ಯಾ ಪಕ್ದಲ್ಲೇ ಇದೆ. ಲ್ಯಾಂಡ್‌ ಬೌಂಡರಿ ಇಲ್ದಿದ್ರೂ, ಬಾಲ್ಟಿಕ್‌ ಸಮುದ್ರ ರಷ್ಯಾ ಸ್ವೀಡನ್‌ಗಳನ್ನ ಕನೆಕ್ಟ್‌ ಮಾಡುತ್ತೆ. ಬಹಳ ಹತ್ರಾನೆ ಇದೆ. ಆರಾಮಾಗಿ ನೌಕಾ ದಾಳಿ ಮಾಡ್ಬೋದು. ಸೊ ಇಷ್ಟೆಲ್ಲಾ ಬೆಳವಣಿಗೆ ಇರೋದ್ರಿಂದ ಅಮೆರಿಕ ಈ ಯಾವ್ದಕ್ಕೂ ಇರ್ಲಿ ಅಂತ ಅಣ್ವಸ್ತ್ರಗಳನ್ನ ಇರಿಸೋಕೆ ರೆಡಿಯಾಗಿದೆ.

-masthmagaa.com

Contact Us for Advertisement

Leave a Reply