ಜೋರ್ಡಾನ್‌ ದಾಳಿ! ಸೇಡು ತೀರಿಸಿಕೊಳ್ಳೋಕೆ ಅಮೆರಿಕ ಸಜ್ಜು!

masthmagaa.com:

ಸಿರಿಯಾ ಗಡಿಯಲ್ಲಿರುವ ಈಶಾನ್ಯ ಜೋರ್ಡಾನ್‌ನಲ್ಲಿ ಜನವರಿ 28ರಂದು ನಡೆದ ಅಪರಿಚಿತ ಡ್ರೋನ್‌ ದಾಳಿಗೆ ಅಮೆರಿಕದ 3 ಸೈನಿಕರು ಪ್ರಾಣಕಳೆದುಕೊಂಡಿದ್ರು. ಈ ದಾಳಿಗೆ ಇರಾನ್‌ ಬೆಂಬಲಿತ ಉಗ್ರ ಗುಂಪೇ ಕಾರಣ ಅಂತ ಆರೋಪಿಸಿದ ಅಮೆರಿಕ ಇದೀಗ ಪ್ರತಿದಾಳಿ ನಡೆಸೋಕೆ ರೆಡಿಯಾಗ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇರಾನ್‌ ಪ್ರಾಕ್ಸಿ ಗುಂಪುಗಳ ವಿರುದ್ಧ ದಾಳಿ ಶುರು ಮಾಡ್ಕೊಳ್ಳಲಿದೆ. ಒಂದ್‌ ಬಾರಿ ಅಧ್ಯಕ್ಷ ಜೋ ಬೈಡನ್‌ ಹೋಗಿ.. ಯುದ್ಧ ಮಾಡಿ ಅಂತ ಕರೆಕೊಟ್ಟಿದ್ಮೇಲೆ ಬ್ಯಾಕ್‌ ಟು ಬ್ಯಾಕ್‌ ದಾಳಿ ನಡೆಸೋ ಪ್ಲಾನ್‌ ಹಾಕೊಂಡಿದೆ. ಹೀಗಂತ ಅಮೆರಿಕದ ಪೆಂಟಗಾನ್‌ ಮೂಲಗಳು ಮಾಹಿತಿ ನೀಡಿವೆ. ಆದ್ರೆ ಅತ್ತ ಇರಾನ್‌ ಮಾತ್ರ ತನ್ನ ಮೇಲಿನ ಆರೋಪವನ್ನ ತಳ್ಳಿ ಹಾಕ್ತಿದೆ. ನಮ್ಮ ಮೇಲಿನ ಆರೋಪ ಬೇಸ್‌ಲೆಸ್‌, ಇದಕ್ಯಾವ್ದೇ ರೀತಿಯ ಆಧಾರವಿಲ್ಲ ಅಂತ ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್‌ ಕನಾನಿ ಹೇಳಿದ್ದಾರೆ.. ಅಲ್ಲದೇ ʻಸಿರಿಯಾ ಮತ್ತು ಇರಾಕ್‌ನಲ್ಲಿ ಅಮೆರಿಕದ ದಾಳಿ ಮತ್ತು ಗಾಜಾ ಯುದ್ಧ ಇದೇ ರೀತಿ ಮುಂದುವರೆದ್ರೆ ಆಯಾ ಪ್ರದೇಶಗಳಲ್ಲಿ ಅಸ್ಥಿರತೆ ಹೆಚ್ಚಾಗುತ್ತೆ ಹೊರತು ಕಡಿಮೆಯಾಗಲ್ಲ ಅಂದಿದ್ದಾರೆ. ಜೊತೆಗೆ ಈ ರೀತಿ ದಾಳಿ ನಡೆಸೋಕೆ ʻಬಂಡಾಯ ಗುಂಪುಗಳುʼ ನಮ್ಮಿಂದ ಆರ್ಡರ್‌ ತೆಗೆದ್ಕೊಳ್ಳೋದಿಲ್ಲ. ಡೈರೆಕ್ಟ್‌ ಆಗಿ ದಾಳಿ ನಡೆಸ್ತಾರೆ ಅಷ್ಟೇʼ ಅಂತ ಹೇಳಿದ್ದಾರೆ.

ಇನ್ನು ಜೋರ್ಡಾನ್‌ ದಾಳಿ ಸಂಬಂಧ ಮಹತ್ವದ ವಿಷಯವೊಂದು ಹೊರಬಿದ್ದಿದೆ. ಈಶಾನ್ಯ ಜೋರ್ಡಾನ್‌ನಲ್ಲಿ ಹತತ್ರ 350 ಅಮೆರಿಕ ಸೇನಾ ಪಡೆಗಳಿದ್ರೂ ಉಗ್ರರ ಡ್ರೋನ್‌ ಹೊಡೆದುರುಳಿಸೋಕೆ ಯಾಕ್‌ ಯಾಗಿಲ್ಲ ಅನ್ನೋದಕ್ಕೆ ಕಾರಣ ಸಿಕ್ಕಂತಿದೆ. ಇರಾನ್‌ ಬೆಂಬಲಿತ ಉಗ್ರರ ಡ್ರೋನ್‌ನ ಅಮೆರಿಕ ಸೇನಾ ಪಡೆಗಳು, ತಪ್ಪಾಗಿ ತಮ್ಮದೇ ಅಂದ್ರೆ ಅಮೆರಿಕದ ಡ್ರೋನ್‌ ಅಂದ್ಕೊಂಡು ಈ ರೀತಿ ಆಗಿದೆ ಎನ್ನಲಾಗ್ತಿದೆ. ಅಂದ್ರೆ ಇರಾನ್‌ ಲಾಂಚ್‌ ಮಾಡಿದ್ದ ಡ್ರೋನ್‌ ಹಾರಿ ಬರ್ತಿರೋ ಟೈಮ್‌ಲ್ಲೇ, ಅಮೆರಿಕದ ಒಂದು ಡ್ರೋನ್‌ ತನ್ನ ಕೆಲಸ ಮುಗಿಸಿ ಆರ್ಮಿ ಪೋಸ್ಟ್‌ಗೆ ವಾಪಸ್ಸಾಗ್ತಿತ್ತು. ಈ ವೇಳೆ ಅಮೆರಿಕದ ಸೈನಿಕರು ತಮ್ಮ ಬಳಿ ಹಾರಿ ಬರ್ತಿದ್ದ ಉಗ್ರರ ಡ್ರೋನ್‌ನ ತಮ್ಮ ಡ್ರೋನ್‌ ಅಂತ ಮಿಸ್ಟೇಕ್‌ ಮಾಡ್ಕೊಂಡ್ರು. ಹೀಗಾಗಿ ಅದನ್ನ ಹೊಡೆದುರುಳಿಸಿಲ್ಲ. ಇದ್ರಿಂದ ಸುಖಾಸುಮ್ಮನೆ ಅಮೆರಿಕದ 3 ಸೈನಿಕರು ಪ್ರಾಣ ಕಳೆದುಕೊಳ್ಳೊ ಹಾಗಾಯ್ತು. ಈ ವಿಚಾರ ದಾಳಿ ಕುರಿತು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ.

-masthmagaa.com

Contact Us for Advertisement

Leave a Reply