ಪನ್ನುನ್‌ ಹತ್ಯೆ ಸಂಚಿನಲ್ಲಿ ಭಾರತದ ಮಾಜಿ RAW ಅಧಿಕಾರಿ: ವರದಿ!

masthmagaa.com:

ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತಸಿಂಗ್‌ ಪನ್ನೂನ್‌ ಹತ್ಯೆ ಸಂಚಿನ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಪನ್ನುನ್‌ ಹತ್ಯೆಗೆ ಭಾರತದ ಮಾಜಿ RAW ಅಧಿಕಾರಿ ವಿಕ್ರಮ್‌ ಯಾದವ್‌ ಅನ್ನೋರು ಹಿಟ್‌ ಟೀಮ್‌ನ್ನ ನಿಯೋಜಿಸಿ ಸಂಚು ರೂಪಿಸಿದ್ರು, ಅಂತ ಅಮೆರಿಕದ ಸುದ್ದಿವಾಹಿನಿ ವಾಶಿಂಗ್‌ಟನ್‌ ಪೋಸ್ಟ್‌ ವರದಿ ಮಾಡಿದೆ. ಅಲ್ಲದೇ ಈ ಆಪರೇಷನ್‌ಗೆ ಅಂದಿನ RAW ಮುಖ್ಯಸ್ಥ ಸಮಂತ್‌ ಗೋಯೆಲ್‌ ಅವ್ರು ಅನುಮತಿ ನೀಡಿದ್ರು. ಅಮೆರಿಕದಲ್ಲಿ RAW ಅಧಿಕಾರಿ ವಿಕ್ರಮ್‌ ಯಾದವ್‌ ದಾಳಿಕೋರ ತಂಡವನ್ನ ನೇಮಿಸೋದು, ಸೂಚನೆ ನೀಡೋ ಕೆಲಸವನ್ನ ಮಾಡಿದ್ರು. ಪನ್ನುನ್‌ ನ್ಯೂಯಾರ್ಕ್‌ ವಿಳಾಸವನ್ನ ಇವ್ರೇ ಕಳಿಸಿದ್ರು. ಆದ್ರೆ ಸುಮಿತ್‌ ಗೋಯೆಲ್‌ಗೆ ಇಂತಹ ಕಾಂಪ್ಲೆಕ್ಸ್‌ ಆಪರೇಷನ್‌ಗಳನ್ನ ಹ್ಯಾಂಡಲ್‌ ಮಾಡೋ ಟ್ರೈನಿಂಗ್‌ ಮತ್ತು ಸ್ಕಿಲ್ಸ್‌ ಕೊರತೆ ಇತ್ತು. ಅದ್ರಲ್ಲಿ ಈ ಆಪರೇಷನ್‌ನ ಅಮೆರಿಕದ ಗುಪ್ತಚರದಳಗಳ ಕಣ್ತಪ್ಪಿಸಿ ಮಾಡ್ಬೇಕಿತ್ತು. ಆ ಅನುಭವ ಸುಮಿತ್‌ ಗೋಯೆಲ್‌ಗೆ ಇರ್ಲಿಲ್ಲ ಅಂತ ವರದಿ ಮಾಡಿದೆ. ಜೊತೆಗೆ ಈ ಹತ್ಯೆ ಸಂಚು ಬಹಿರಂಗ ಆದ್ಮೇಲೆ ಸುಮಿತ್‌ ಗೋಯೆಲ್‌ರನ್ನ CRPFಗೆ ಟ್ರಾನ್ಸ್‌ಫರ್‌ ಮಾಡಲಾಯ್ತು ಅಂತ ವರದಿ ಮಾಡಿದೆ. ಮುಂದುವರೆದು, ಅಮೆರಿಕ ಈ ಪ್ರಕರಣವನ್ನ ಸೀರಿಯಸ್ಸಾಗಿ ತಗೊಂಡಿದ್ರು, ದೋಷಾರೋಪಣೆ ಪಟ್ಟಿಯಲ್ಲಿ ಸುಮಿತ್‌ ಹೆಸರು ಉಲ್ಲೇಖ ಮಾಡಲಿಲ್ಲ. ಜಸ್ಟೀಸ್‌ ಡಿಪಾರ್ಟ್‌ಮೆಂಟ್‌ ಮತ್ತು FBI ಅಧಿಕಾರಿಗಳು ಸುಮಿತ್‌ ಹೆಸರು ಸೇರಿಸೋಕೆ ಒತ್ತಡ ಹಾಕ್ತಿದ್ರು. ಆದ್ರೆ ಇದ್ರಿಂದ ಅಮೆರಿಕ ಭಾರತದ RAW ಹತ್ಯೆಯಲ್ಲಿ ಭಾಗವಾಗಿದೆ ಅಂತ ನೇರವಾಗಿ ಆರೋಪ ಮಾಡಿದಂತೆ ಆಗ್ತಿತ್ತು. ಹೀಗಾಗಿ ದೋಷಾರೋಪ ಪಟ್ಟಿಯಲ್ಲಿ ಭಾರತೀಯ ಅಧಿಕಾರಿ ಸೂಚನೆಯಲ್ಲಿ ಸಂಚು ನಡೆದಿದೆ ಅಂತ ಹೇಳಿದೆ. ಆದ್ರೆ ಯಾವ ಅಧಿಕಾರಿ, ಯಾವ ಏಜೆನ್ಸಿ ಅಂತ ಹೇಳಿಲ್ಲ ಅಂತ ವಾಷಿಂಗಟನ್‌ ವರದಿ ಮಾಡಿದೆ. ಇನ್ನು ಇದಕ್ಕೆ ತೀವ್ರ ಖಂಡನೆ ವ್ಯಕ್ತ ಡಿಸಿರೊ ಭಾರತ, ಇಂತಹ ಗಂಭೀರ ವಿಷಯದಲ್ಲಿ ಇದೊಂದು ಅನಗತ್ಯ ಹಾಗೂ ಆಧಾರ ರಹಿತ ಆರೋಪವಾಗಿದೆ ಅಂತೇಳಿ ರಿಯಾಕ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply