ಪಾಕ್‌ನಲ್ಲಿ ಹೆಚ್ಚಿದೆ ಮಾನವ ಹಕ್ಕುಗಳ ಉಲ್ಲಂಘನೆ: ಅಮೆರಿಕ

masthmagaa.com:

ಪಾಕಿಸ್ತಾನದಲ್ಲಿ ಅತೀ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗ್ತಿದೆ. ಆದ್ರೆ ಪಾಕ್‌ ಸರ್ಕಾರ ಮಾತ್ರ ಈ ಬಗ್ಗೆ ಯಾವ್ದೇ ರೀತಿ ಕ್ರಮ ತೆಗೆದ್ಕೊಳ್ತಿಲ್ಲ. ಅದನ್ನ ಕಡಿಮೆ ಮಾಡೋಕೆ ಶ್ರಮ ಪಡ್ತಿಲ್ಲ ಅಂತ ಅಮೆರಿಕ ಆರೋಪ ಮಾಡಿದೆ. `2023 Country Reports on Human Rights Practices’ ವರದಿ ಪ್ರಕಾರ, ʻಪಾಕ್‌ನಲ್ಲಿ ಕಾನೂನುಬಾಹಿರ ಹತ್ಯೆಗಳು, ಬಲವಂತವಾಗಿ ನಾಪತ್ತೆಯಾಗೋದು, ಕಠಿಣ ಜೈಲು ಶಿಕ್ಷೆ, ಯಾವ್ದೇ ಸಾಕ್ಷ್ಯಗಳಿಲ್ಲದೇ ಸುಖಾಸುಮ್ಮನೆ ಬಂಧನ ಮಾಡೋದು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯ ಮೇಲೆ ನಿರ್ಬಂಧಗಳನ್ನ ಹೇರೋದು ಜಾಸ್ತಿಯಾಗ್ತಿದೆ. ಈ ಬಗ್ಗೆ ಪಾಕ್‌ ಸರ್ಕಾರ ಮಾತ್ರ ಯಾವ್ದೇ ರೀತಿ ಕ್ರಮ ತೆಗೆದುಕೊಳ್ತಿಲ್ಲ. ಮಾನವ ಹಕ್ಕುಗಳನ್ನ ಉಲ್ಲಂಘನೆ ಮಾಡಿದವ್ರಿಗೆ ಶಿಕ್ಷೆ ನೀಡ್ತಿಲ್ಲʼ ಅಂತ ಅಮೆರಿಕ ತನ್ನ ರಿಪೋರ್ಟ್‌ನಲ್ಲಿ ಹೇಳಿದೆ.

-masthmagaa.com

Contact Us for Advertisement

Leave a Reply