ಗಾಜಾ ಯುದ್ಧದಲ್ಲಿ ಹಮಾಸ್‌ ಜೊತೆ ವಿಶ್ವಸಂಸ್ಥೆ! ಅಮೆರಿಕ ಶಾಕ್‌!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧದ ವಿಚಾರದಲ್ಲಿ ಇದೀಗ ಹೊಸ ವಿಷಯವೊಂದು ಹೊರಗೆ ಬಂದಿದೆ. ವಿಶ್ವಸಂಸ್ಥೆ ಏಜೆನ್ಸಿಯೊಂದ್ರ ಉದ್ಯೋಗಿಗಳು ಗಾಜಾ ಯುದ್ಧದಲ್ಲಿ ಹಮಾಸ್‌ ಜೊತೆ ಸೇರ್ಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ವಿಶ್ವಸಂಸ್ಥೆಯ ರಿಲೀಫ್‌ & ವರ್ಕ್ಸ್‌ ಏಜೆನ್ಸಿ ಅಥ್ವಾ UNRWA ಸಿಬ್ಬಂದಿ, ಅಕ್ಟೋಬರ್‌ 7ರ ಹಮಾಸ್‌ ದಾಳಿಗೆ ಸಪೋರ್ಟ್‌ ಮಾಡಿದ್ರು ಎನ್ನಲಾಗಿದೆ. ಈ ಬಗ್ಗೆ ಇಸ್ರೇಲ್‌ ಅಧಿಕಾರಿಗಳು UNRWAಗೆ ಮಾಹಿತಿ ನೀಡಿದ್ದಾರೆ. ಆದ್ರಿಂದ ಈ ಏಜೆನ್ಸಿ ತನ್ನ ಹಲವಾರು ಶಂಕಿತ ಉದ್ಯೋಗಿಗಳ ವಿರುದ್ಧ ತನಿಖೆ ಚಾಲು ಮಾಡಿದೆ ಅಂತ ಸಂಸ್ಥೆಯ ಕಮಿಷನರ್‌-ಜನರಲ್‌ ಫಿಲಿಪ್‌ ಲೆಜ಼ಾರಿನಿ ಹೇಳಿದ್ದಾರೆ. ಆದ್ರೆ ಎಷ್ಟು ಮಂದಿ ಉದ್ಯೋಗಿಗಳು ಈ ದಾಳಿಯಲ್ಲಿ ಇನ್ವಾಲ್ವ್‌ ಆಗಿದ್ರು ಅನ್ನೋ ಬಗ್ಗೆ ಮಾಹಿತಿ ನೀಡಿಲ್ಲ.

ಇನ್ನು ಈ ಬಗ್ಗೆ ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಮಾಥ್ಯೂ ಮಿಲ್ಲರ್‌ ರಿಪ್ಲೈ ಮಾಡಿದ್ದಾರೆ. ಗಾಜಾ ಯುದ್ಧದಲ್ಲಿ UNRWA ಸಿಬ್ಬಂದಿ ಇನ್ವಾಲ್ವ್‌ ಆಗಿರೋ ವಿಚಾರ ತಿಳಿದು ಶಾಕ್‌ ಆಗಿದೆ. ಸದ್ಯಕ್ಕೆ ಸಂಸ್ಥೆಗೆ ಹಣಸಹಾಯ ಮಾಡೋದನ್ನ ನಿಲ್ಲಿಸಲಾಗಿದೆ. ವಿಶ್ವಸಂಸ್ಥೆ ಈ ಸಮಸ್ಯೆ ಬಗೆಹರಿಸೋ ತನಕ ಅಮೆರಿಕದಿಂದ ಯಾವ್ದೇ ರೀತಿಯ ಹಣಸಹಾಯ ಸಿಗಲ್ಲ ಅಂದಿದ್ದಾರೆ. ಇನ್ನು UNRWAಗೆ ಅತಿ ಹೆಚ್ಚಿನ ಹಣಸಹಾಯ ಮಾಡೋ ರಾಷ್ಟ್ರ ಕೂಡ ಅಮೆರಿಕ. 2022ರಲ್ಲಿ ಅಮೆರಿಕ ಈ ಏಜೆನ್ಸಿಗೆ 340 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 2.8 ಸಾವಿರ ಕೋಟಿ ರೂಪಾಯಿ ಹಣ ನೀಡಿತ್ತು.

-masthmagaa.com

Contact Us for Advertisement

Leave a Reply