ಚೀನಾದ ಹಿರಿಯ ರಾಜತಾಂತ್ರಿಕ ಅಧಿಕಾರಿ ಮೀಟ್‌ ಮಾಡಿದ ಜೋ ಬೈಡೆನ್‌: ಭೇಟಿ ಹಿಂದಿನ ಮರ್ಮವೇನು?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಚೀನಾ ಅಧ್ಯಕ್ಷ ಶಿ ಜಿನ್‌ ಪಿಂಗ್ ಭೇಟಿಗೆ ಕಾಲ ಕೂಡಿ ಬಂದಂತೆ ಕಾಣ್ತಿದೆ. ಈಗಾಗಲೆ ಹಲವು ಭಾರಿ ಬೈಡೆನ್‌ ಜಿನ್‌ ಪಿಂಗ್ ಮೀಟ್‌ ಮಾಡೋ ಇಂಟ್ರೆಸ್ಟ್‌ ತೋರ್ಸಿದ್ರು. ಇದಕ್ಕೆ ಪುಷ್ಠಿ ಕೊಡುವಂತೆ ನಿನ್ನೆ ಶುಕ್ರವಾರ ಬೈಡೆನ್‌ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ರನ್ನ ಭೇಟಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೊ ವೈಟ್‌ಹೌಸ್‌ ವಕ್ತಾರ ಜಾನ್‌ ಕಿರ್ಬಿ “ಉಭಯ ದೇಶಗಳು ತಮ್ಮ ಸಂಬಂಧಗಳನ್ನ ವಾಪಸ್‌ ಟ್ರ್ಯಾಕ್‌ಗೆ ತಂದು ಸುಸ್ಥಿರ ಅಭಿವೃದ್ಧಿ ಸಾಧಿಸೊ ಕುರಿತು ಮಾತನಾಡಿವೆ. ಮುಕ್ತ ಮಾತುಕತೆ ಸಾಧಿಸೊ ಜೊತೆಗೆ, ಇಸ್ರೇಲ್‌, ಯುಕ್ರೇನ್‌ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡೋ ನಿಟ್ಟಿನಲ್ಲಿ ಮಾತನಾಡಿದ್ದಾರೆ. ಎರಡು ದೇಶಗಳಿಗೆ ಇದೊಂದು ಪಾಸಿಟಿವ್‌ ಡೆವೆಲಪ್‌ಮೆಂಟ್‌. ಬೈಡೆನ್‌ ಸಹ ಶಿ ಜಿನ್‌ಪಿಂಗ್‌ ಅವರನ್ನ ಮೀಟ್‌ ಮಾಡೋಕೆ ಉತ್ಸುಕನಾಗಿದ್ದೇನೆ. ಆ ಬಗ್ಗೆ ವಿಶ್ವಾಸ ಇದೆ ಅಂದಿದ್ದಾರೆ. ಎರಡು ದೇಶಗಳು ವಿವಿಧ ವಿಚಾರಗಳಲ್ಲಿ ಬೇರೆ ಬೇರೆ ನಿಲುವುಗಳನ್ನ ಹೊಂದಿವೆ. ಅವುಗಳ ಮೇಲೆ ನಾವು ವರ್ಕ್‌ ಮಾಡ್ತೇವೆ” ಅಂತ ಹೇಳಿದ್ದಾರೆ. ಇತ್ತ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ಮಾಥಿವ್‌ ಮಿಲ್ಲರ್‌ ಮಾತನಾಡಿ “ಮಿಡ್ಲ್‌ ಈಸ್ಟ್‌ನ ಹಲವು ದೇಶಗಳಲ್ಲಿ ಚೀನಾ ಪ್ರಭಾವ ಇದೆ. ಹಾಗಾಗಿ ಚೀನಾ ಮಿಡ್ಲ್‌ ಈಸ್ಟ್‌ನಲ್ಲಿ ಶಾಂತಿ, ಸ್ಥಿರತೆ ತರೊ ಪ್ರಯತ್ನ ಮಾಡ್ಬೇಕು” ಅಂದಿದ್ದಾರೆ. ಅಂದ್ಹಾಗೆ 2018ರ ನಂತರ ಚೈನೀಸ್‌ ಗೂಡ್ಸ್‌ಗಳ ಮೇಲೆ ಟ್ರಂಪ್‌ ವಿಧಿಸಿದ ಹೆಚ್ಚುವರಿ ಸುಂಕ, ದಕ್ಷಿಣ ಚೀನ ಸಮುದ್ರ, ತೈವಾನ್‌, ಟೆಕ್ನಾಲಜಿ, ಕೊವಿಡ್-19‌ ಕಾರಣಗಳಿಂದ ಎರಡೂ ದೇಶಗಳ ಸಂಬಂಧ ವಿಪರೀತ ಹಾಳಾಗಿದೆ. ಮುಂದೆ ಏನಾಗುತ್ತೊ ನೋಡಬೇಕು.

-masthmagaa.com

Contact Us for Advertisement

Leave a Reply