ಯಾರು ಇಲ್ಲದ ವೇದಿಕೆ ಮೇಲೆ ಬೈಡೆನ್​ ಶೇಕ್​ ಹ್ಯಾಂಡ್​​ಗೆ ಕೈ ಚಾಚಿದ್ದು ಯಾರಿಗೆ?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಭಾಷಣ ಮುಗಿದ ನಂತ್ರ ಶೇಕ್‌ಹ್ಯಾಂಡ್‌ ಮಾಡಲು ಹೋಗಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಗ್ರೀನ್ಸ್‌ಬೊರೊದಲ್ಲಿರೋ ಉತ್ತರ ಕೆರೊಲಿನಾ ಕೃಷಿ ಮತ್ತು ತಾಂತ್ರಿಕ ರಾಜ್ಯ ವಿಶ್ವವಿದ್ಯಾಲಯದಲ್ಲಿ 40 ನಿಮಿಷ ಜೋ ಬೈಡೆನ್ ಭಾಷಣ ಮಾಡಿದ್ರು. ನಂತ್ರ ಶೇಕ್‌ಹ್ಯಾಂಡ್‌ ಮಾಡೋಕೆ ಕೈ ಮುಂದಕ್ಕೆ ಚಾಚಿದ್ದಾರೆ. ಇಲ್ಲಿ ತಮಾಷೆ ಏನಂದ್ರೆ ವೇದಿಕೆ ಮೇಲೆ ಯಾರು ಇರ್ಲಿಲ್ಲ. ಆದ್ರೂ ಬೈಡೆನ್​ ಕೈಯನ್ನ ಮುಂದಕ್ಕೆ ಚಾಚಿದ್ದು ಎಲ್ಲರನ್ನೂ ನಗುವಂತೆ ಮಾಡಿದೆ. ಇದ್ರ ವಿಡಿಯೋ ವೈರಲ್‌ ಆಗಿ ಅನೇಕ ಕಾಮೆಂಟ್‌ಗಳು ಕೂಡಾ ಬರ್ತಿವೆ. 60ಕ್ಕೆ ಅರಳು-ಮರಳು ಅನ್ನೋಥರ 79 ವರ್ಷದ ಬೈಡನ್‌ ಈ ರೀತಿ ಆಗಾಗ ಮಾಡ್ತಿರ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಕಾಲೆಳೆಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply