ಇಯಾನ್‌ ಚಂಡಮಾರುತದಿಂದ ಹೆಚ್ಚಿನ ಸಾವು-ನೋವುಗಳಾಗಿರಬಹುದು: ಜೋ ಬೈಡೆನ್

masthmagaa.com:

ಫ್ಲೋರಿಡಾವನ್ನ ಗುಡಿಸಿ ಹಾಕಿರೋ ಇಯಾನ್‌ ಚಂಡಮಾರುತದಿಂದ ಅನೇಕ ಸಾವುಗಳಾಗಿರಬಹುದು ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಎಚ್ಚರಿಸಿದ್ದಾರೆ. ʻextremely dangerousʼ ಅಂದ್ರೆ ತುಂಬಾ ಅಪಾಯಕಾರಿ ಅಂತ ಗುರುತಿಸಿಕೊಂಡಿರೊ ಇಯಾನ್‌ ಚಂಡಮಾರುತ ಕೆಟಗರಿ 4ಕ್ಕೆ ಸೇರಿದೆ. ಚಂಡಮಾರುತದಿಂದ ಸುಮಾರು 26 ಲಕ್ಷ ಮನೆಗಳು, ವ್ಯಾಪಾರಗಳು ಹಾನಿಗೊಳಗಾಗಿವೆ. ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಅನ್ನು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸದ್ಯದಲ್ಲೇ ಈ ಬಗ್ಗೆ ವರದಿ ಬರಲಿದೆ, ಹೆಚ್ಚಿನ ಪ್ರಮಾಣದ ಸಾವು-ನೋವುಗಳಾಗಿರಬಹುದು ಅಂತ ಬೈಡೆನ್‌ ಹೇಳಿದ್ದಾರೆ. ಅಂದ್ಹಾಗೆ ಫ್ಲೋರಿಡಾವನ್ನ ಚಂಡಮಾರುತ ಅಪ್ಪಳಿಸಿದಾಗ ಎಲ್ಲ ಬೆಂಬಲ ಕೊಡೋದಾಗಿ ಅಮೆರಿಕ ಅಧ್ಯಕ್ಷ ಜೋಬೈಡನ್ ಮಾತು ಕೊಟ್ಟಿದ್ರು. ಇನ್ನು ದಕ್ಷಿಣ ಫ್ಲೋರಿಡಾವನ್ನ ಬಿಟ್ಟು, ಇಯಾನ್‌ ಚಂಡಮಾರುತ ಇದೀಗ ಅಮೆರಿಕದ ರಾಜ್ಯ ದಕ್ಷಿಣ ಕರೊಲಿನಾದತ್ತ ತನ್ನ ಸವಾರಿ ಬೆಳೆಸಿದೆ ಅಂತ ಹವಾಮಾನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply