ಪನ್ನೂನ್‌ ಹತ್ಯೆ ಸಂಚಿನ ವಿಚಾರ: W.P ವರದಿ ಬಗ್ಗೆ ಅಮೆರಿಕ ಪ್ರತಿಕ್ರಿಯೆ!

masthmagaa.com:

ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್‌ ಹತ್ಯೆ ಸಂಚಿನ ವಿಚಾರವಾಗಿ ಭಾರತದ ಕೈವಾಡವಿದೆ ಅಂತೇಳಿ ವರದಿ ಮಾಡಿದ್ದ ಅಮೆರಿಕದ ವಾಶಿಂಗ್‌ಟನ್‌ ಪೋಸ್ಟ್‌ ವರದಿ ವಿಚಾರವಾಗಿ ಇದೀಗ ಖುದ್ದು ಅಮೆರಿಕ ಸರ್ಕಾರ ರಿಯಾಕ್ಟ್‌ ಮಾಡಿದೆ. ಇದು ಗಂಭೀರ ವಿಷಯ..ನಾವ್‌ ಇದನ್ನ ತುಂಬಾ ಸಿರಿಯಸ್‌ ಆಗಿ ತಗೊಂಡಿದ್ದೀವಿ ಅಂತ ಅಮೆರಿಕದ ವಕ್ತಾರ ವೇದಾಂತ್‌ ಪಟೇಲ್‌ ಹೇಳಿಕೆ ನೀಡಿದ್ದಾರೆ. ಅಲ್ದೇ ಈ ವಿಚಾರವಾಗಿ ನಾವು, ಭಾರತ ಸರ್ಕಾರದ ಜೊತೆ ರೆಗ್ಯುಲರ್‌ ಆಗಿ ಕೆಲಸ ಮಾಡ್ತಿದ್ದು, ಹೆಚ್ಚಿನ ಅಪ್‌ಡೇಟ್ಸ್‌ ಬಗ್ಗೆ ವಿಚಾರಿಸ್ತಿದ್ವಿ. ಜೊತೆಗೆ ಭಾರತದ ತನಿಖಾ ದಳ ನಡೆಸಿರೋ ತನಿಖೆಯ ರಿಸಲ್ಟ್‌ನ ಆಧಾರದ ಮೇಲೆ ಪಾರದರ್ಶಕತೆ ನಿರೀಕ್ಷೆ ಮಾಡೋದನ್ನ ಕಂಟಿನ್ಯೂ ಮಾಡ್ತೇವೆʼ ಅಂತೇಳಿದ್ದಾರೆ. ಈ ಮೂಲಕ ವಾಶಿಂಗ್‌ಟನ್‌ ಪೋಸ್ಟ್‌ ಭಾರತ ಮೇಲೆ ಮಾಡಿರೊ ಗಂಭೀರ ಆರೋಪದ ವರದಿಯನ್ನ ಪಟೇಲ್‌ ಪರೋಕ್ಷವಾಗಿ ತಳ್ಳಿ ಹಾಕಿದ್ದಾರೆ. ಅಂದ್ಹಾಗೆ ಪನ್ನುನ್‌ ಹತ್ಯೆಗೆ ಭಾರತದ ಮಾಜಿ RAW ಅಧಿಕಾರಿ ವಿಕ್ರಮ್‌ ಯಾದವ್‌ ಅನ್ನೋರು ಹಿಟ್‌ ಟೀಮ್‌ನ್ನ ನಿಯೋಜಿಸಿ ಸಂಚು ರೂಪಿಸಿದ್ರು, ಅಲ್ಲದೇ ಈ ಆಪರೇಷನ್‌ಗೆ ಅಂದಿನ RAW ಮುಖ್ಯಸ್ಥ ಸಮಂತ್‌ ಗೋಯೆಲ್‌ ಅವ್ರು ಅನುಮತಿ ನೀಡಿದ್ರು ಅಂತ ವಾಶಿಂಗ್‌ಟನ್‌ ಪೋಸ್ಟ್‌ ವರದಿ ಮಾಡಿತ್ತು. ಇದಕ್ಕೆ ಭಾರತ ಕೂಡ ತೀವ್ರ ಖಂಡನೆ ವ್ಯಕ್ತಪಡಿಸಿ, ಇಂತಹ ಗಂಭೀರ ವಿಷಯದಲ್ಲಿ ಇದೊಂದು ಅನಗತ್ಯ ಹಾಗೂ ಆಧಾರ ರಹಿತ ಆರೋಪವಾಗಿದೆ ಅಂತೇಳಿ ರಿಯಾಕ್ಟ್‌ ಮಾಡಿತ್ತು.

-masthmagaa.com

Contact Us for Advertisement

Leave a Reply