ರಷ್ಯಾ ಕೆಮಿಕಲ್‌ ವೆಪನ್‌ ಬಳಸ್ತಿದೆ ಅಂತ ಆರೋಪಿಸಿದ ಅಮೆರಿಕ!

masthmagaa.com:

ಯುಕ್ರೇನ್‌ ಮೇಲೆ ದಾಳಿ ಮಾಡ್ತಿರೋ ರಷ್ಯಾ ವಿರುದ್ದ ಇದೀಗ ಅಮೆರಿಕ ದೊಡ್ಡ ಆರೋಪ ಮಾಡಿದೆ. ರಷ್ಯಾ ನಿಷೇಧಿತ ಅಸ್ತ್ರಗಳನ್ನ ಬಳಸಿ ಅಂತಾರಾಷ್ಟ್ರೀಯ ಕಾನೂನನ್ನ ಉಲ್ಲಂಘಿಸ್ತಿದೆ ಅಂತ ಹೇಳಿದೆ. ಕ್ಲೋರೋಪಿಕ್ರಿನ್‌ ಅನ್ನೋ ಹಾನಿಕಾರಕ ಕೆಮಿಕಲ್‌ ಬಳಸಿ ಯುಕ್ರೇನ್‌ ಸೇನಾ ಪಡೆಗಳ ಜೊತೆ ಯುದ್ಧ ಮಾಡ್ತಿದೆ. ಈ ರೀತಿ ಯುಕ್ರೇನ್‌ ಪಡೆಗಳನ್ನ ಸೋಲಿಸೋಕೆ ಟ್ರೈ ಮಾಡ್ತಿದೆ, ಇದೆಲ್ಲಾ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಆರೋಪಿಸಿದೆ. ಸದ್ಯ ಈ ಬಗ್ಗೆ ಅಮೆರಿಕದಲ್ಲಿರೋ ರಷ್ಯಾದ ರಾಯಭಾರ ಕಚೇರಿ ಯಾವ್ದೇ ರಿಯಾಕ್ಟ್‌ ಮಾಡಿಲ್ಲ. ಅಂದ್ಹಾಗೆ ಈ ಕ್ಲೋರೋಪಿಕ್ರಿನ್‌ ಕೆಮಿಕಲ್‌ ಬಳಕೆಯಿಂದ ಎದುರಾಳಿಗಳನ್ನ ಉಸಿರುಗಟ್ಟಿಸ್ಬೋದು ಹಾಗೂ ಆರಾಮಾಗಿ ಒಂದು ಗುಂಪನ್ನ ಚದುರಿಸ್ಬೋದು. ಈ ಕೆಮಿಕಲ್‌ನ್ನ ಆರ್ಗನೈಸೇಷನ್‌ ಫಾರ್‌ ದ ಪ್ರಾಹಿಬಿಷನ್‌ ಆಫ್‌ ಕೆಮಿಕಲ್‌ ವೆಪನ್ಸ್‌ ಬ್ಯಾನ್‌ ಮಾಡಿತ್ತು. ಆದ್ರೆ ಇದೀಗ ರಷ್ಯಾ ಇದನ್ನ ಉಲ್ಲಂಘಿಸಿ ತಮ್ಮ ಸೇನೆಯಲ್ಲಿ ಬಳಸ್ತಿದೆ ಅಂತ ಅಮೆರಿಕ ಆರೋಪ ಮಾಡಿದೆ. ಇನ್ನು ಈ ಹಿಂದೆ ಯುಕ್ರೇನ್‌ ಸೇನೆ ಕೂಡ ರಷ್ಯಾ ವಿರುದ್ಧ ಇದೇ ರೀತಿ ಆರೋಪ ಮಾಡಿತ್ತು. ಕ್ಲೋರೋಪಿಕ್ರಿನ್‌ ಕೆಮಿಕಲ್‌ ಮಾತ್ರವಲ್ದೇ… CS ಮತ್ತು CN ಗ್ಯಾಸ್‌ಗಳು ಲೋಡ್‌ ಆಗಿರೋ ಶಸ್ತ್ರಾಸ್ತ್ರಗಳನ್ನ ರಷ್ಯಾ ಪಡೆಗಳು ಉಪಯೋಗಿಸ್ತಿದ್ರು ಅಂತ ಹೇಳಿತ್ತು.

-masthmagaa.com

Contact Us for Advertisement

Leave a Reply