‘CAA’ ಜಾರಿಗೆ ಅಮೇರಿಕ ಆಕ್ಷೇಪ! ಭಾರತಕ್ಕೆ ದೊಡ್ಡಣ್ಣನ ಉಪದೇಶ!

masthmagaa.com:

ಭಾರತದಲ್ಲಿ ಪೌರತ್ವ ತಿದ್ದುಪಡಿಯನ್ನ ಮಾರ್ಚ್‌ 11 ರಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಜಾರಿ ಮಾಡಿತ್ತು. ಇದೀಗ ಈ ವಿಚಾರವಾಗಿ ಭಾರತದಲ್ಲಿ ಸಾಕಷ್ಟು ಪರ-ವಿರೋಧಗಳು ಕೇಳಿಬರ್ತಿವೆ. ಇದು ಓಕೇ….ಒಪ್ಪಿಕೊಳ್ಬೋದು. ಯಾಕಂದ್ರೆ ಭಾರತೀಯರು.. ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸ್ತಿದ್ದಾರೆ. ಆದ್ರೆ ದೂರದ ಅಮೆರಿಕ ಭಾರತದ ಕಾನೂನಿಗೆ ಹಸ್ತಕ್ಷೇಪ ಮಾಡೋದು ಎಷ್ಟು ಸರಿ! ಎಸ್‌..ಇದೀಗ ಭಾರತದಲ್ಲಿ ಸಿಎಎ ಕಾಯ್ದೆ ಜಾರಿಯಾಗಿರೋ ಬಗ್ಗೆ ವಿಶ್ವದ ದೊಡ್ಡಣ್ಣ ನಂದೂ ಒಂದ್ ಅಭಿಪ್ರಾಯ ಇರಲಿ ಅಂತ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸೋ ಕೆಲಸ ಮಾಡಿದೆ. ʻಭಾರತದಲ್ಲಿ ಮಾರ್ಚ್‌ 11ರಂದು ಸಿಎಎ ಜಾರಿಯಾಗಿರೋದು ನಮಗೆ ಬಹಳ ಚಿಂತೆ ನೀಡಿದೆ… ಟೆನ್ಶನ್‌ ಕೊಟ್ಬಿಟ್ಟಿದೆ. ನಾವು ಈ ಬಗ್ಗೆ ಬಹಳ ಸೂಕ್ಷ್ಮವಾಗಿ ಗಮನಹರಿಸ್ತಿದ್ದೀವಿ. ಈ ಕಾಯ್ದೆಯನ್ನ ಹೇಗೆ ಇಂಪ್ಲಿಮೆಂಟ್‌ ಮಡಲಾಗುತ್ತೆ ಅಂತ ಮಾನಿಟರ್‌ ಮಾಡ್ತಿದ್ದೀವಿ. ಧಾರ್ಮಿಕ ಸ್ವಾತಂತ್ರ್ಯದ ಗೌರವ ಮತ್ತು ಎಲ್ಲಾ ಸಮುದಾಯಗಳನ್ನ ಕಾನೂನಡಿಯಲ್ಲಿ ಸಮಾನವಾಗಿ ಪರಿಗಣಿಸೋದು ಪ್ರಜಾಪ್ರಭುತ್ವದ ತತ್ವಗಳಾಗಿವೆʼ. ಹೀಗಂತ ಅಮೆರಿಕದ ವಿದೇಶಾಂಗ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಭಾರತಕ್ಕೆ ಉಪದೇಶ ನೀಡಿದ್ದಾರೆ. ಅಂದ್ಹಾಗೆ ತನ್ನ ಬುಡದಲ್ಲೇ ಸಾವಿರಾರು ಸಮಸ್ಯೆಗಳನ್ನ ಹೊಂದಿರೋ ಅಮೆರಿಕ ಈ ರೀತಿ ಬೇರೆ ದೇಶಗಳಿಗೆ ಉಪದೇಶ ನೀಡೋದು…ಮೂಗು ತೂರಿಸೋ ಕೆಲಸ ಸದಾ ಮಾಡ್ತಲೇ ಇರುತ್ತೆ. ಆದ್ರೆ ತನ್ನ ದೇಶಕ್ಕೆ ಲೆಕ್ಕವಿಲ್ಲದಷ್ಟು ವಲಸಿಗರು ಅಕ್ರಮವಾಗಿ ನುಗ್ತಿರೋದನ್ನ ತಡಿಯೋಕೆ ಮಾತ್ರ ಅಮೆರಿಕ ದೊಡ್ಡಣ್ಣನಿಗೆ ಆಗ್ತಿಲ್ಲ. ಈ ಬಗ್ಗೆ ಅಮೆರಿಕ ಜನರೇ ಅಲ್ಲಿನ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಅಮೆರಿಕದ Gallup ರಿಸರ್ಚ್‌ ಸಂಸ್ಥೆಯೊಂದು ನಡೆಸಿರೋ ಸರ್ವೇನಲ್ಲಿ, ಅಮೆರಿಕವನ್ನ ಅತೀ ಹೆಚ್ಚು ಕಾಡ್ತಿರೋ ಸಮಸ್ಯೆ ಅಂದ್ರೆ ಅದು ವಲಸಿಗರ ಹಾವಳಿ ಅಂತ ರಿವೀಲ್‌ ಆಗಿದೆ. 2024ರ ಜನವರಿಯಲ್ಲಿ ನಡೆಸಲಾದ ಈ ವೋಟಿಂಗ್‌ನಲ್ಲಿ 28% ಅಮೆರಿಕ ಜನರು ʻವಲಸೆʼಯೇ ಅಮೆರಿಕದ ದೊಡ್ಡ ಸಮಸ್ಯೆ ಅಂತ ಹೇಳಿದ್ದಾರೆ. ಇನ್ನು ಬೈಡನ್‌ ಸರ್ಕಾರದ ಅವಧಿಯಲ್ಲಿ ಒಟ್ಟು 63 ಲಕ್ಷಕ್ಕೂ ಅಧಿಕ ವಲಸಿಗರು ಅಕ್ರಮವಾಗಿ ಅಮೆರಿಕಕ್ಕೆ ನುಗ್ಗಿದ್ದಾರೆ ಅಂತ BBC ಇತ್ತೀಚೆಗಷ್ಟೇ ರಿವೀಲ್‌ ಮಾಡಿತ್ತು. ಆದ್ರೆ ಈ ಸಮಸ್ಯೆಯನ್ನ ಬಗೆಹರಿಸೋಕೆ ಆಗದ ಅಮೆರಿಕ ಸರ್ಕಾರ ಮಾತ್ರ ಭಾರತದ ಸಿಎಎ ವಿಚಾರವಾಗಿ ಬೋಧನೆ ನೀಡ್ತಿದೆ. ಇನ್ನು ಅಮೆರಿಕದಲ್ಲಿ ಯಾರು ಯಾವಾಗ ಬಂದು ಯಾರಿಗೆ ಗುಂಡು ಹಾರಿಸ್ತಾರೋ ಅನ್ನೋ ಭಯ ತುಂಬಿದೆ. ದಿನಾ ಒಂದಿಲ್ಲೊಂದು ಕಡೆ ದಾಳಿಗಳು ಆಗ್ತಾನೇ ಇರುತ್ವೆ. ಶಾಲೆ, ಶಾಪಿಂಗ್‌ ಮಾಲ್‌ ಅಂತ ನೋಡದೆ ಅಲ್ಲಿನ ಬಂದೂಕುದಾರಿಗಳು ದಾಳಿ ಮಾಡ್ತಾನೆ ಇರ್ತಾರೆ.. ಸರಿಯಾದ ಆಯುಧಗಳ ಕಾನೂನಿಲ್ಲ.. ಆದ್ರೂ ಬಂಧೂಕನ್ನ ಬೇಕಾಬಿಟ್ಟಿ ನೀಡೋದ್ರಿಂದ ಆಗ್ತಿರೋ ಹಿಂಸಾಚಾರವನ್ನ ತಡೆಯೋಕೆ ಇನ್ನೂ ಸೂಕ್ತ ಕಾನೂನು ಜಾರಿ ಮಾಡೋಕಾಗದ ಅಮೆರಿಕಕ್ಕೆ, ಬೇರೆ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸೋದನ್ನ ಬಿಡಲ್ಲ. ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆಯಾದ್ರೆ ಅದರ ತನಿಖೆಗೆ ಭಾರತ ಸಹಕಾರ ಕೊಡ್ಬೇಕು ಅಂತೇಳಿತ್ತು. ಪನ್ನುನ್‌ ಕೇಸ್‌ನಲ್ಲಂತೂ ಚುರುಕಾಗಿ ತನಿಖೆ ಮಾಡೋಕೆ ಮುಂದಾಗಿದೆ. ಇದೀಗ ಸಿಎಎ ವಿಚಾರದಲ್ಲೂ ನಾಲಿಗೆ ಹರಿಬಿಟ್ಟಿದೆ.

-masthmagaa.com

Contact Us for Advertisement

Leave a Reply