ಅಮೆರಿಕ-ಟರ್ಕಿ ನಡುವೆ ಮನಸ್ತಾಪ? ಡ್ರೋನ್‌ ಹೊಡೆದುರುಳಿಸಿದ ಅಮೆರಿಕ!

masthmagaa.com:

ನ್ಯಾಟೋ ಗುಂಪಿನಲ್ಲೇ ಇರೊ ಅಮೆರಿಕ ಹಾಗೂ ಟರ್ಕಿ ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ಭುಗಿಲೆದ್ದಿದೆ. ಟರ್ಕಿಗೆ ಸೇರಿದ್ದ ಡ್ರೋನ್‌ ಒಂದನ್ನ ಅಮೆರಿಕದ ಎಫ್‌ 16 ವಿಮಾನ ಹೊಡೆದು ಹಾಕಿದೆ. ಸಿರಿಯಾದಲ್ಲಿರೊ ತನ್ನ ಸೇನೆಗಳಿಗೆ ಬೆದರಿಕೆಯಾದ ಕಾರಣ ಈ ಡ್ರೋನ್‌ ಅನ್ನು ಹೊಡೆದುರುಳಿಸಿರೋದಾಗಿ ಅಮೆರಿಕ ಹೇಳಿಕೊಂಡಿದೆ. ಸಿರಿಯಾದಲ್ಲಿ ಇರೊ ಕುರ್ದಿಶ್‌ ಪಡೆಗಳನ್ನ ಟಾರ್ಗೆಟ್‌ ಮಾಡಿ ಟರ್ಕಿ ದಾಳಿ ನಡೆಸೋಕೆ ಮುಂದಾಗಿತ್ತು. ಕಳೆದ ಭಾನುವಾರ ಸಿರಿಯಾ ರಾಜಧಾನಿ ಅಂಕಾರದಲ್ಲಿ ಆತ್ಮಾಹುತಿ ದಾಳಿ ಮಾಡಿತ್ತು. ಈ ಹಿನ್ನೆಲೆ ಅಮೆರಿಕ ಟರ್ಕಿ ಡ್ರೋನ್‌ನ್ನ ಹೊಡೆದು ಹಾಕಿದೆ. ಇದಕ್ಕೆ ಟರ್ಕಿ ಇದುವರೆಗೂ ಯಾವುದೇ ರಿಯಾಕ್ಟ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply