ದೀಪಾವಳಿಯನ್ನ ಆಫಿಶಿಯಲ್‌ ರಜಾ ದಿನವಾಗಿ ಘೋಷಿಸಿದ ಅಮೆರಿಕದ ಪೆನ್ಸಿಲ್ವೇನಿಯಾ!

masthmagaa.com:

ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿ ದಿನವನ್ನ ಆಫಿಶಿಯಲ್‌ ರಜಾ ದಿನವಾಗಿ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯ ಘೋಷಿಸಿದೆ. ಈ ಕುರಿತು ಅಲ್ಲಿನ ಸಂಸದ ನಿಕಿಲ್‌ ಸವಲ್‌ ಟ್ವೀಟ್‌ ಮಾಡಿದ್ದಾರೆ. ದೀಪಾವಳಿಯನ್ನ ರಾಜ್ಯ ರಜಾ ದಿನವಾಗಿ ಗುರುತಿಸಲು ಅಲ್ಲಿನ ಮೇಲ್ಮನೆ ಒಮ್ಮತದಿಂದ ಮತ ಹಾಕಿದೆ ಅಂತ ನಿಕಿಲ್‌ ತಿಳಿಸಿದ್ದಾರೆ. ಸಂಸದ ಗ್ರೆಗ್‌ ರೋಥ್‌ಮನ್‌ ಮತ್ತು ಸೆನೆಎಟರ್‌ ನಿಕಿಲ್‌ ವಾಲ್‌ ಕಳೆದ ಫೆಬ್ರವರಿಯಲ್ಲಿ ದೀಪಾವಳಿಯನ್ನ ಅಧಿಕೃತ ರಾಜ್ಯ ರಜಾದಿನವನ್ನಾಗಿ ಮಾಡಲು ಬಿಲ್‌ನ್ನ ಪರಿಚಯಿಸಿದ್ರು. ಇದೀಗ ಈ ಬಿಲ್‌ ಅಲ್ಲಿನ ಸೆನೆಟ್‌ನಲ್ಲಿ ಪಾಸ್‌ ಆಗಿದೆ.

-masthmagaa.com

Contact Us for Advertisement

Leave a Reply